AVIN TV

Latest Online Breaking News

ಅದಾನಿಗೆ ಅನುಕೂಲ ಮಾಡಲು 6 ಕೋಟಿ ಕನ್ನಡಿಗರ ಮೇಲೆ ಬಿಜೆಪಿ ಸರಕಾರದಿಂದ ಹೊರೆ #avintvcom

Featured Video Play Icon

ವಿದ್ಯುತ್ ಖರೀದಿಯಲ್ಲಿ ರಾಜ್ಯ ಬಿಜೆಪಿ ಸರಕಾರದಿಂದ 3400 ಕೋಟಿ ಬೃಹತ್ ಹಗರಣ: ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪ
ಅದಾನಿಗೆ ಅನುಕೂಲ ಮಾಡಲು 6 ಕೋಟಿ ಕನ್ನಡಿಗರ ಮೇಲೆ ಬಿಜೆಪಿ ಸರಕಾರದಿಂದ ಹೊರೆ
ಕಳೆದ 10 ವರ್ಷಗಳಲ್ಲಿ ವಿದ್ಯುತ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯ
ಬೆಂಗಳೂರು ನವೆಂಬರ್ 23: ಅದಾನಿಗೆ ಅನುಕೂಲ ಮಾಡಲು 6 ಕೋಟಿ ಕನ್ನಡಿಗರ ಮೇಲೆ ಬಿಜೆಪಿ ಸರ್ಕಾರ ಹೊರೆ ಹಾಕುತ್ತಿದೆ. ಅಲ್ಲದೆ ವಿದ್ಯುತ್ ಖರೀದಿಯಲ್ಲಿ ಬಿಜೆಪಿ ಸರಕಾರದಿಂದ 3400 ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ತಿಂಗಳ 12 ನೇ ತಾರೀಕಿನಂದು ಶಾಕ್ ಬೇಡಾ ಎನ್ನುವ ಅಭಿಯಾನವನ್ನು ಆಮ್ ಆದ್ಮಿ ಪಕ್ಷ ಪ್ರಾರಂಭಿಸಿತ್ತು ಮತ್ತು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ “ಬಿಲ್ ಕಡಿಮೆ ಮಾಡಿ, ಇಲ್ಲ ಜಾಗ ಮಾಡಿ” ಎಂದು 19ನೇ ತಾರೀಕಿನಂದು ಸವಾಲು ಹಾಕಿತ್ತು, ಈ ಸವಾಲಿಗೆ ಕಿಂಚಿತ್ತೂ ಸ್ಪಂದಿಸದ ಸರ್ಕಾರದ ಮೌನಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.
ಕಳೆದ ಪತ್ರಿಕಾ ಗೋಷ್ಠಿಯಲ್ಲಿ, ಸರ್ಕಾರವು ಹೇಗೆ ಹೆಚ್ಚಿಗೆ ಹಣ ಕೊಟ್ಟು ವಿದ್ಯುತ್ ಖರೀದಿ ಮಾಡುತ್ತಿದೆ ಮತ್ತು ಪ್ರಸರಣ, ವಿತರಣೆ ವೇಳೆ ಆಗುತ್ತಿರುವ ನಷ್ಟ ಮತ್ತು ಕಳ್ಳತನವನ್ನು ನಿಯಂತ್ರಿಸುತ್ತಿಲ್ಲ, ಈ ಭ್ರಷ್ಟ ಮತ್ತು ಅಸಮರ್ಥ ಅಧಿಕಾರಿಗಳು, ರಾಜಕಾರಣಿಗಳೆಲ್ಲ ಸೇರಿ ಈ ಹೊರೆಯನ್ನು ಹೇಗೆ ಜನ ಸಾಮಾನ್ಯರ ಮೇಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದೆವು.
ಇಂತಹ ಸಂಕಷ್ಟದ ಸಮಯದಲ್ಲಿ ಜನರ ಲೂಟಿ ಹೊಡೆಯುತ್ತಿರುವ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಹೇಗೆ ಅದಾನಿ ಕಂಪೆನಿಯ ಜೇಬು ತುಂಬಿಸಲು ಹೊರಟಿದೆ ಎಂಬುದಕ್ಕೆ ಇಲ್ಲಿದೆ ನಿದರ್ಶನ.
1. ಉಡುಪಿ ವಿದ್ಯುತ್ ಸ್ಥಾವರ 2010 ರಲ್ಲಿ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಇದನ್ನು 2014 ರಲ್ಲಿ ಅದಾನಿ ಪವರ್ ಖರೀದಿಸಿತು. ಪ್ರಸ್ತುತ 2000 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು ಅದರಲ್ಲಿ 1800 ಮೆಗಾವ್ಯಾಟ್ (90%) ಅನ್ನು ಸರ್ಕಾರ ಖರೀದಿಸುತ್ತಿದೆ.
2. 2018 ರಲ್ಲಿ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗದ (ಸಿಇಆರ್ಸಿ) ಪ್ರಕಾರ ರಾಷ್ಟ್ರೀಯ ಸರಾಸರಿ ವಿದ್ಯುತ್ ಖರೀದಿ ವೆಚ್ಚ (ಎನ್ಎಪಿಸಿ) ಯುನಿಟ್ಗೆ 3.53 ರೂ. ಮತ್ತು ಕಳೆದ ಐದು ವರ್ಷಗಳಲ್ಲಿ ಸರಾಸರಿ ಹೆಚ್ಚಳವು ವರ್ಷಕ್ಕೆ 2% ಕ್ಕಿಂತ ಕಡಿಮೆಯಿದೆ.
3. ಅದಾನಿ ಪವರ್ ಒಡೆತನದ ಉಡುಪಿ ಪವರ್ಗೆ ಕಳೆದ ಎರಡು ವರ್ಷಗಳಲ್ಲಿ ವಿದ್ಯುತ್ ಖರೀದಿ ಬೆಲೆಯಲ್ಲಿ 42% ಹೆಚ್ಚಳ ಮಾಡಿ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಿದೆ- 2018 ರಲ್ಲಿ ಪ್ರತಿ ಯೂನಿಟ್ಗೆ 4.76 ರೂ.ಗಳಿಂದ 2020 ರಲ್ಲಿ 6.80 ರೂ.ಗೆ ಏರಿಸಿದ್ದು. ಇದು ಬೆಸ್ಕಾಂಗೆ ಸಾಕಷ್ಟು ಹೊರೆಯಾಗಿದೆ.
4. 2019ರಲ್ಲಿ ಅದಾನಿ ಕಂಪೆನಿಯಿಂದ ವಿದ್ಯುತ್ ಖರೀದಿಸಿದ ಒಟ್ಟು ಬಿಲ್ ರೂ 1224 ಕೋಟಿ. ಎಪಿಪಿಸಿ ಬೆಲೆಗೆ ಹೋಲಿಸಿದರೆ 563 ಕೋಟಿಗಳಷ್ಟು ಹೆಚ್ಚು ಪಾವತಿ ಮಾಡಿದೆ.
5. ಹೆಚ್ಚಿನ ದರಕ್ಕೆ ಕರ್ನಾಟಕ ಸರ್ಕಾರ ವಿದ್ಯುತ್ ಖರೀದಿಸಿದ ಈ ಎರಡು ವರ್ಷಗಳಲ್ಲಿ ಕಲ್ಲಿದ್ದಿಲಿನ ಬೆಲೆ 40% -50% ರಷ್ಟು ಕಡಿಮೆ ಆಗಿದೆ. ಇದರಿಂದ ಅದಾನಿ ಕಂಪೆನಿ ಸುಮಾರು 450 ಕೋಟಿ ರೂ ಹೆಚ್ಚುವರಿ ಲಾಭ ಮಾಡಿದೆ, ಆದರೂ ರಾಜ್ಯ ಬಿಜೆಪಿ ಸರ್ಕಾರ ಜನರ ಮೇಲೆ ವಿದ್ಯುತ್ ದರ ಹೆಚ್ಚಳದ ಮೂಲಕ ಈ ಹೊರೆ ಹಾಕಿದೆ.
6. ಶೇ 6 ವಿದ್ಯುತ್ ದರದ ಹೆಚ್ಚಳದ ಮೌಲ್ಯ ಸುಮಾರು 250 ಕೋಟಿ ರೂಪಾಯಿ. ಇದನ್ನು ಗ್ರಾಹಕರಿಂದ ಸುಲಿಗೆ ಮಾಡಲಾಗಿದೆ. ಇದು ಅದಾನಿಯ ಜೇಬು ತುಂಬಿಸಿದೆ ಹೊರತು ಸರ್ಕಾರದ್ದಲ್ಲ.
7. ಪ್ರತಿ ವರ್ಷ ಶೇ 10 ಹೆಚ್ಚು ಹಣ ಕೊಟ್ಟು ಖರೀದಿಸಿರುವ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್ಸಿ) ತಿಳಿಸಿರುವ ಸರಾಸರಿ ಬೆಲೆಗಿಂತ 2.5 ಹೆಚ್ಚಿನ ಮೊತ್ತವನ್ನು ಪಾವತಿ ಮಾಡಲಾಗಿದೆ.

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!