AVIN TV

Latest Online Breaking News

ಮಲ್ಲಿಕಾರ್ಜುನ ರಡ್ಡೇರ ಅಭಿವೃದ್ಧಿಗೆ ನಿಂತು ಕೇವಲ 3 ವರ್ಷದಲ್ಲಿ ಸಹಾಕಾರ ಪಡೆದು ಮಾಡಿದ ಕಾರ್ಯ ನೋಡಿ #avintvcom

Featured Video Play Icon

ನಮ್ಮೂರು ಅಭಿವೃದ್ಧಿ ಮಾಡ್ಬೇಕು, ನಮ್ಮೂರಿಗೆ ಪಂಚಾಯ್ತಿ ಬೇಕು, ಸಾರಿಗೆ ಬಸ್ಸ್ ಬೇಕು, ಮೂಲ ಸೌಕರ್ಯ ಬೇಕು ಎಂಬ ಆಲೋಚನೆ ಯಾರಿಗಿಲ್ಲ ಹೇಳಿ. ಆದ್ರೇ ಇವೆಲ್ಲವೂ ಬೇಕದ್ರೇ ಈ ಅಧಿಕಾರಿಗಳನ್ನ ಬೆನ್ನೆಟ್ಟಿ ರಾಜಕಾರಣಿಗಳು ಬೆನ್ನುಬಿದ್ದು ನಮ್ಮ ಮನೆ ಮರೆತು ಊರಿಗಾಗಿ ದುಡಿಯಬೇಕಲ್ವೇ ಇಂತಹ ಕೆಲಸದಿಂದಲೇ ಹೆಸರಾದ ಈ ಯುವಕ ಸ್ಟೋರಿ ನೋಡಿ..
ಈತನೇ ಮಲ್ಲಿಕಾರ್ಜುನ ರಡ್ಡೇರ ಮೂಲತಃ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಪಿಯುಸಿ ಓದಿದ ವಿಧ್ಯಾವಂತ ಗ್ರಾಮದ ಅಭಿವೃದ್ಧಿಗಾಗಿ ಪಿಯುಸಿಗೆ ಕಾಲೇಜು ಕೈ ಬಿಟ್ಟು, ಈ ಊರು ಅಭಿವೃದ್ಧಿಗೆ ನಿಂತು ಕೇವಲ 3 ವರ್ಷದಲ್ಲಿ ಈತ ಗ್ರಾಮಸ್ಥರ ಸಹಾಕಾರ ಪಡೆದು ಮಾಡಿದ ಕಾರ್ಯಗಳನ್ನ ಜನ ಇಂದಿಗೂ ನೆನೆಯುತ್ತಾರೆ ಅವೇನು ಅಂದ್ರಾ ನೋಡಿ.
ಅಲ್ಲಾಪೂರ ಕಡಪಟ್ಟಿ ಹಳ್ಳಾಳ ಗ್ರಾಮದಲ್ಲಿ ಮೊದಲಿದ್ದ ಒಂದು ಬಸ್ ಇತ್ತು ಸತತವಾಗಿ ಆರು ತಿಂಗಳ ಕಾಲ ಹೋರಾಟ ಮಾಡಿ ಒಂದು ಹೊಸ ಬಸ್ ಹೆಚ್ಚಿಸಿ 17 ಸಾರಿಗೆ ದರವನ್ನು 13 ರೂಪಾಯಿಗೆ ಮಾಡಿ ಸಾರಿಗೆ ಸಚಿವರನ್ನೇ ಬೇಟಿ ಆಗಿದ್ದು,
ಹಲವು ವರ್ಷಗಳಿಂದ ಪಕ್ಕದ ಗ್ರಾಮದಲ್ಲಿ ರೇಷನ್ ಸೀಮೆ ಎಣ್ಣೆ ವಿತರಣೆ ಮಾಡುವುದನ್ನ ತಪ್ಪಿಸಿ ಮಹಿಳೆಯರಿಗೆ ಮಕ್ಕಳಿಗೆ ಅಲ್ಲಾಪುರ ಗ್ರಾಮದಲ್ಲಿ ರೇಷನ್ ನೀಡುವ ವ್ಯವಸ್ಥೆ ಕೊಡುವಂತೆ ಮಾಡಿದ್ರೂ,
ದಶಕದ ಹಳೆಯ ಸರ್ಕಾರಿ ಶಾಲೆ ಬಿಳುವ ಹಂತದಲ್ಲಿತ್ತು ಇದರ ಸಲುವಾಗಿ ಆರು ತಿಂಗಳ ಕಾಲ ಸತತವಾಗಿ ಐದು ಜನ ಕೂಡಿ ಹೋರಾಟ ಮಾಡಿ ಹೊಸ 3 ಕಟ್ಟಡವನ್ನು ಮಂಜೂರು ಮಾಡಲು ಬೆಂಗಳೂರಿಗೆ ಹೋಗಿ ಬಂದಿದ್ದೇವೆ. ಹೋರಾಟಕ್ಕೆ ಸಿಕ್ಕ ಜಯ ಮೂರು ಸರ್ಕಾರಿ ಶಾಲೆಹೊಸ ಕಟ್ಟಡ ಈ ಶಾಲೆ ಹೋರಾಟದಲ್ಲಿ ಆಗಿನ ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ ಮೂರು ಹೊಸ ಕಟ್ಟಡವನ್ನು ಮಂಜೂರು ಮಾಡಿಸಿದ್ದೇವೆ. ಇದರ ಸಲುವಾಗಿ ಕುಂದಗೋಳ ಶಾಸಕರು ಸವಾಲನ್ನು ಹಾಕಿದರು ಅದರಿಂದ ಗೆದ್ದು ಹೊಸ ಕಟ್ಟಡವನ್ನು ಮಂಜೂರು ಮಾಡಿಸಿದ್ದೇವೆ ಆಗದೇ ಶಾಸಕರು ನಮ್ಮನ್ನು ಹೊಗಳಿ ಹಾಡಿದ್ದಾರೆ.
ಸುಮಾರು ವರ್ಷಗಳಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರು, ಆದರೆ ಅದು ಸರಿಯಾಗಿ ಆಗದೆ ನೀರು ನಿಂತು ಎರಡು ವರ್ಷಗಳೇ ಕಳೆದು ಹೊಲಸು ನಾರುತ್ತಿತ್ತು. ಆ ಓಣಿ ಜನರು ಸಂಬಂಧಪಟ್ಟ ಅಧಿಕಾರಿಗಳ ಹೋದರೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಹೊಸ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಿದ ಇನ್ನು ಎರಡು ಹೊಸ ರಸ್ತೆಯನ್ನು ಕೂಡ ನಿರ್ಮಾಣ ಮಾಡಿಸಿದ್ರೂ.
ಕಳಸಾ-ಬಂಡೂರಿ ಹೋರಾಟ ಸಮಯದಲ್ಲಿ ಕುಂದಗೋಳ ಎತ್ತು ಚಕ್ಕಡಿ ಯೊಂದಿಗೆ ತೆಗೆದುಕೊಂಡು ಹೋಗಿ ರೈತರೊಂದಿಗೆ ಕುಂದಗೋಳ ತಹಶೀಲ್ದಾರ್ ಕಚೇರಿ ಎದುರು ಹೋರಾಟ ಮಾಡಿದ್ದೇನೆ ಮತ್ತೆ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಹೋರಾಟ ಮಾಡಿದ್ರೂ.
ಕುಂದಗೋಳ ಕಡಪಟ್ಟಿ ರಸ್ತೆ ಕೆಟ್ಟದ್ದು, ಕಳಪೆ ಕಾಮಗಾರಿ ಆಗಿತ್ತು ಅದರ ಸಲುವಾಗಿ ಗ್ರಾಮದಲ್ಲಿ ಹೋರಾಟ ಮಾಡಿದ್ದೇವೆ ಹೋರಾಟಕ್ಕೆ ಜಯ ಸಿಕ್ಕಿದೆ ಮತ್ತೆ ಡಾಂಬರೀಕರಣ ಆಗಿದೆ.
ಪಂಚಾಯತಿ ಅವರ ನಿರ್ಲಕ್ಷದಿಂದ ಗಟಾರ ಸ್ವಚ್ಛತೆ ಇಲ್ಲದೆ ಇರುವ ಕಾರಣ ನಾವು ಮತ್ತು ನಮ್ಮ ಗೆಳೆಯರು ಸ್ವಚ್ಛ ಮಾಡಿದ್ರೂ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಗುಡೇನಕಟ್ಟಿ ರಸ್ತೆಯ ಬಗ್ಗೆ ಹಾಗೂ ಇನ್ನಿತರ ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಪತ್ರ ಬರೆದ್ರೂ.
ಪ್ರಕೃತಿ ವಿಕೋಪದಿಂದ ಗ್ರಾಮದಲ್ಲಿ ನೀರು ಹೊಕ್ಕು ಮನೆಗಳಿಗೆ ನೀರು ನುಗ್ಗಿ ದಾಗ ಗ್ರಾಮದ ಕೆಲವು ಮನೆಯವರಿಗೆ ಬಹಳ ಸಮಸ್ಯೆಯಾಗಿತ್ತು, ಅವರಿಗೆ ಸರ್ಕಾರದಿಂದ ಊಟ ಬಟ್ಟೆ ತರಕಾರಿ ಅಕ್ಕಿಯನ್ನು ಕೊಡಿಸಿದ್ದೇನೆ ವಿವಿಧ ಸಂಸ್ಥೆಗಳಿಂದ ಅವರಿಗೆ ರಾತ್ರಿ ಹಗಲು ಎನ್ನದೆ ಸಹಾಯ ಕೈ ಚಾಚಿದ್ರೂ.
ಶಾಲೆ ವಿದ್ಯಾರ್ಥಿಗಳಿಗೆ ಏನಾದರೂ ಸಮಸ್ಯೆ ಆದರೆ ಸ್ಪಂದಿಸುವುದು, ಕಡಪಟ್ಟಿ ಅಲ್ಲಾಪುರ ಅವಳಿ ಗ್ರಾಮಗಳ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುವುದು.
ನೋಡಿದ್ರಲ್ಲಾ.. ನಮ್ಮೂರು ನಮ್ಮ ಜನರ ಬಗ್ಗೆ ಮಿಡಿಯುವ ಹಬ್ಬಲ ನಿಮಗೂ ಇದ್ರೇ ಈಗಲೇ ನಿಮ್ಮೂರಿನ ಅಭಿವೃದ್ಧಿಗೆ ಈ ಯುವನಂತೆ ನೀವು ತಯಾರಾಗಿ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!