AVIN TV

Latest Online Breaking News

ಪ್ರಾಣ ಬಿಟ್ಟರೂ ಹರಪನಹಳ್ಳಿ ನೂತನ ಜಿಲ್ಲೆಯ ಹೋರಾಟ ಬಿಡೆನು -ಮೌಲ್ವಿ ಖಾಜಿ ಮುಸ್ತಾಕ್ ಆಹ್ಮದ್ ರಜ್ವಿ

ಪ್ರಾಣ ಬಿಟ್ಟರೂ ಹರಪನಹಳ್ಳಿ ನೂತನ ಜಿಲ್ಲೆಯ ಹೋರಾಟ ಬಿಡೆನು -ಮೌಲ್ವಿ ಖಾಜಿ ಮುಸ್ತಾಕ್ ಆಹ್ಮದ್ ರಜ್ವಿ.
ಹರಪನಹಳ್ಳಿ ಪ್ರವಾಸಿ ಮಂದಿರ ವೃತ್ತದಲ್ಲಿ ನ ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿ ಯ ಟೆಂಟ್ ನಲ್ಲಿ ಹರಪನಹಳ್ಳಿ ಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿಯ ಮೌಲವಿ ಖಾಜೀ ಮುಸ್ತಾಕ್ ಅಹ್ಮದ್ ರಜ್ವಿ ರವರು “ಅಮರಣಾಂತರಉಪವಾಸ ಸತ್ಯಾಗ್ರಹ” ಕೈಗೊಂಡಿದ್ದಾರೆ.ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲಾಕೇಂದ್ರದಿಂದ 150 ಕಿ.ಮಿ ದೂರವಿದ್ದು ಜನರು ತಮ್ಮ ಸರ್ಕಾರಿ ಕೆಲಸಕಾರ್ಯಗಳಿಗಾಗಿ ಓಡಾಡುವುದು ತೀರಾ ಸಮಸ್ಯೆಯಾಗಿದೆ ಕಳೆದ ಒಂದು ವರ್ಷದಿಂದ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕಿಗಳಿಗೆ ಸೂಕ್ತ ಕೇಂದ್ರವಾದ ಹರಪನಹಳ್ಳಿಯನ್ನು ಹೊಸ ಜಿಲ್ಲೆಯನ್ನು ಘೋಷಿಸುವಂತೆ ಹೋರಾಟ ಆರಂಬಿಸಿದ್ದರೊ ಕಳೆದ ವರ್ಷ ಅಕ್ಟೊಬರ್ ತಿಂಗಳು ಸರ್ಕಾರ ಸಭೆನಡೆಸಿ ಪರೀಶೀಲಿಸುವ ಭರವಸೆ ನಿಡಿದ್ದ ಸರ್ಕಾರ ಇದೀಗ ಏಕಾಏಕೀ ಹೊಸಪೇಟೆಯನ್ನು ವಿಜಯನಗರ ನೂತನ ಜಿಲ್ಲೆಯನ್ನು ಮಾಡುಲು ತಾತ್ವಿಕ ಒಪ್ಪಿಗೆ ನೀಡಿರುವುದು ಸರಿಯಲ್ಲ ಆ ಕಾರಣದಿಂದಾಗಿ ಹರಪನಹಳ್ಳಿಯನ್ನು ಜಿಲ್ಲೆ ಮಾಡುವವರೆಗೂ ಉಪವಾಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು . ಉಪವಾಸ ನಿರತರೊಂದಿಗೆ ಜನಪರ ಚಿಂತಕರು , ಸಾಹಿತಿಗಳು, ಬುದ್ಧಿಜೀವಿಗಳು, ರೈತಪರ, ದಲಿತಪರ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಮತ್ತು ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿ ಯ ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯ ಕರ್ತರು ಉಪವಾಸ ನಿರತರೊಂದಿಗೆ ಧರಣಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪಕ್ಷಾತೀತ ಹಾಗೂ ಜಾತ್ಯಾತೀತ ವಾಗಿ ಬೆಂಬಲಿಸಿ- -ಭಾಗವಹಿಸಿದ್ದರು ಸ್ಥಳಕ್ಕೆ ಆಗಮಿಸಿದ ಶಿರಸ್ತೆದಾರರಾದ ವಿರೂಪಾಕ್ಷಶೆಟ್ರು ಮಾತನಾಡಿ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದರು ಈ ಸಂದರ್ಭದಲ್ಲಿ ರೈತ ಮುಖಂಡ ಹೊಸಹಳ್ಳಿ ಮಲ್ಲೇಶ್,ಇದ್ಲಿರಾಮಪ್ಪ,,ಗುಡಿಹಳ್ಳಿಹಾಲೇಸ್ ರಮೇಶ್ ಮುಂತಾದವರು ಉಪಸ್ಥಿತರಿದ್ದರು .ಧರಣಿ ಸ್ಥಳಕ್ಕೆ ಭೇಟಿನೀಡಿದ್ದ ಬಳ್ಳಾರಿ ಸಂಸದ ವೈ.ದೇವೆಂದ್ರಪ್ಪನವರಿಗೆ ಧರಣಿ ನಿರತರು ದಿಕ್ಕಾರ ಕೂಗಿ ಬಹಿಷ್ಕರಿಸಿದರು.

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!