AVIN TV

Latest Online Breaking News

ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ, ಅವರ ಪ್ರತಿಭೆಗೆ ಪ್ರೋತ್ಸಾಹಿಸುವುದು ನಮ್ಮ ಧ್ಯೇಯವಾಗಿದೆ. #avintvcom

Featured Video Play Icon

ಹುಬ್ಬಳ್ಳಿ, ಘಂಟಿಕೇರಿ
ಮಕ್ಕಳು ಮಮತೆ, ವಾತ್ಸಲ್ಯದ ಪ್ರತಿರೂಪ.
ಮುದ್ದು ಕಂದಮ್ಮಗಳಿಗೆ ಹೆತ್ತವರ ಪ್ರೀತಿ, ಆರೈಕೆ ಅತೀ ಮುಖ್ಯ. ಆದರೆ ಕೆಲ ಮಕ್ಕಳು ಹುಟ್ಟಿನಿಂದಲೇ ಹೆತ್ತವರ ಅಕ್ಕರೆಯಿಂದ ದೂರವಿರುತ್ತಾರೆ. ಇಂತಹ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ, ಅವರ ಪ್ರತಿಭೆಗೆ ಪ್ರೋತ್ಸಾಹಿಸುವುದು ನಮ್ಮ ಧ್ಯೇಯವಾಗಿದೆ.
ಈ ಸಲುವಾಗಿ ಹುಬ್ಬಳ್ಳಿಯ ಘಂಟಿಕೇರಿಯ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ, ಮಕ್ಕಳ ಕುಶಲೋಪರಿ ವಿಚಾರಿಸಿದರು. ಬಳಿಕ ಪುಟಾಣಿಗಳಿಗೆ ಬಟ್ಟೆ ಹಾಗೂ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಿದರು. ನಂತರ ಮಕ್ಕಳ ಯೋಗ ನೃತ್ಯ, ಏರೋಬಿಕ್ಸ್, ಪೋಪೆಟ್ ಶೋ ವೀಕ್ಷಿಸಿ, ಅವರ ಪ್ರತಿಭೆ ಉತ್ತುಂಗದ ಶಿಖರಕ್ಕೆ ಏರಲಿ ಎಂದು ಹಾರೈಸಿದರು.
ಇದೇ ವೇಳೆ ನಾನು ಅವರ ಮೇಲೆ ತೋರಿದ ಪ್ರೀತಿ, ವಾತ್ಸಲ್ಯವನ್ನು ಕಂಡ ಪುಟಾಣಿಗಳು ನನ್ನನ್ನು ಅವರೊಂದಿಗೆ ಹೆಜ್ಜೆ ಹಾಕುವಂತೆ ಮಾಡಿದರು. ಮುದ್ದು ಕಂದಮ್ಮಗಳನ್ನು ಮುದ್ದಾಡಿದಾಗ ಅವರ ಸಂತೋಷಕ್ಕೆ ಪಾರೇ ಇಲ್ಲ. ತಾಯಿಯ ಪ್ರೀತಿಯಿಂದ ದೂರವಿರುವ ಇಂತಹ ಮಕ್ಕಳಿಗೆ ಮಾತೃಸ್ವರೂಪಿಯ ಮಮತೆ ಸಿಕ್ಕಾಗ ಅವರಲ್ಲಿ ಕಂಡ ಸಂತೋಷ, ಆನಂದಭಾಷ್ಪ ನೋಡಿ ಕಣ್ತುಂಬಿ ಬಂತು. ಮಕ್ಕಳೊಂದಿಗೆ ಊಟ ಮಾಡಿ, ಅವರ ಬಾಳು ನಂದಾದೀಪದಂತೆ ಪ್ರಜ್ವಲಿಸಲಿ ಎಂದು ಹಾರೈಸಲಾಯಿತು. ಇದೇ ಸಂದರ್ಭದಲ್ಲಿ ಇಲಾಖೆಯಿಂದ ಅನಾಥ ಮಕ್ಕಳ ರಕ್ಷಣೆಗೆ ಹೊರಡಿಸಲಾದ ಕರಪತ್ರಗಳನ್ನು ಬಿಡುಗಡೆ ಮಾಡಿದರು.
मुले प्रेम आणि आपुलकीची प्रतिकृती.
पालकांचे प्रेम आणि काळजी चिमुकल्यांना खूप महत्वाची आहे. परंतु काही मुले जन्मापासूनच आपल्या पालकांच्या प्रेमापासून दूर असतात. अशा मुलांना प्रेरणा आणि प्रोत्साहन देणे हे आमचे ध्येय आहे.
या उद्देशाने,हुबळीच्या घंटिकेरीच्या शासकीय कन्या बालमंदिराला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भेट देऊन मुलांची विचारपूस केली. त्यानंतर चिमुकल्यांना कपडे आणि मिठाई भेट म्हणून दिल्या. नंतर मुलांचा योग नृत्य, एरोबिक्स, पोपेट कार्यक्रम पाहणी करून त्यांच्या प्रतुभांना उत्तुंग भरारी येऊ दे अश्या शुभेच्छा दिल्या.
त्याच वेळी त्यांच्यावर दाखवलेले प्रेम वात्सल्य यामुळे चिमुकल्यांनी मला त्यांच्याशी नृत्य करण्यास आकर्षित केली. चिमुकल्यांना माया केल्याने त्यांच्या आनंदाला उभारी आली होती. अशा मुलांसाठी जे त्यांच्या आईच्या प्रेमापासून दूर आहेत त्यांना आईचे प्रेम मिळाल्याने त्यांच्यातील आनंद पाहून डोळे भरून आले. मुलांच्याबरोबर जेवण करून तृप्त झाले, त्यांचे जीवन उज्वल होऊ अश्या शुभेच्छा दिल्या. त्याचवेळी अनाथ मुलांच्या संरक्षणासाठी विभागाने जारी केलेले माहितीपत्रक अनावरण केले.

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!