ರಸ್ತೆ ಕಾಮಗಾರಿಕಗೆ ನೀರನ್ನು ಬಳಸುತ್ತಿರುವ ಗುತ್ತಿಗೆದಾರನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ #avintvcom
ರಾಯಬಾಗ: ರಸ್ತೆ ಕಾಮಗಾರಿಕಗೆ ಕುಡಿಯುವ ನೀರನ್ನು ಬಳಸುತ್ತಿರುವ ಗುತ್ತಿಗೆದಾರನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ನಸಲಾಪುರ ಗ್ರಾಮದ ಜನರ ಜೀವನಾಡಿಯಾಗಿರುವ ಜಲಕುಂಭ ಜನರ ದಾಹವನ್ನು ನೀಗಿಸುತ್ತದೆ ಬರಗಾಲ ಬಿದ್ದಾಗಲ್ಲಂತೂ ಜನರಿಗೆ ಈ ಜಲ ಕುಂಭ ಜೀವನಾಧಾರ ನಸಲಾಪುರ ದಿಂದ ಅಂಕಲಿಯ ವರೆಗೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ವಾಹನಗಳ ಓಡಾಟದಿಂದ ರಸ್ತೆಯ ಮೇಲಿನ ದೂಳು ಮನೆ ಒಳಗಡೆ ಹೋಗಬಾರದೆಂದು ರಸ್ತೆಗೆ ನೀರು ಹಾಕಲಾಗುತ್ತಿದೆ ಅದು ಅಲ್ಲಿಯ ಜನರ ಜೀವಜಲ ಕುಡಿಯುವ ನೀರನ್ನು ರಸ್ತೆಗೆ ಬಳಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಪಕ್ಕದಲ್ಲಿಯೇ ಹಳ್ಳಗಳು ತುಂಬಿ ಹರಿಯುತ್ತಿವೆ ಅಲ್ಲಿಂದ ನೀರನ್ನು ಟ್ಯಾಂಕರ್ ಮೂಲಕ ತಂದು ರಸ್ತೆಗೆ ಬಳಸಿದರೆ ಉತ್ತಮ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ ಈ ಕುರಿತು ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಅಧಿಕಾರಿಗಳು ಸಂಪರ್ಕಕ್ಕೆ ದೊರೆಯದೇ ಇರುವುದು ವಿಪರ್ಯಾಸವೇ ಸರಿ