AVIN TV

Latest Online Breaking News

ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಉಸ್ತುವಾರಿ ಮುನಿಯಪ್ಪ ಒತ್ತಾಯಿಸಿದರು.avintvcom

Featured Video Play Icon

ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಉಸ್ತುವಾರಿ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿದರು
ರಾಜ್ಯ ಸರ್ಕಾರ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು
ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ರಾಜ್ಯ ಸರ್ಕಾರ ಹಕ್ಕುಪತ್ರ ವಿತರಿಸಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಉಸ್ತುವಾರಿ ಸಂಯೋಜಕ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.
ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯಾದ್ಯಂತ ದಲಿತರು, ಶೋಷಿತರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಸುಮಾರು ನಾಲ್ಕು ದಶಕಗಳಿಂದ ಅಲ್ಪ ಪ್ರಮಾಣದ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದರೂ ಈವರೆಗೂ ಹಕ್ಕುಪತ್ರ ನೀಡಿಲ್ಲ. ಕೂಡಲೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಡವರಿಗೆ ಹಕ್ಕುಪತ್ರ ವಿತರಿಸಲು ಕ್ರಮ ಜರುಗಿಸಬೇಕು ಎಂದರು
. ರಾಜ್ಯದಿಂದ ಆಯ್ಕೆಯಾಗಿರುವ 26 ಮಂದಿ ಬಿಜೆಪಿ ಸಂಸದರು ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ತರುವಲ್ಲಿ ವಿಫಲವಾಗಿರುವುದು ಒಂದೆಡೆಯಾದರೆ, ರಾಜ್ಯ ಸರ್ಕಾರ ಕೊರೊನಾ ನೆಪದಲ್ಲಿ ಸರ್ಕಾರಿ ಜಾಗವನ್ನು ಹರಾಜು ಮಾಡಲು ಮುಂದಾಗಿದೆ. ಸರ್ಕಾರ ಬಡವರ ಸಾವಿರಾರು ಎಕರೆ ಜಮೀನನನು ಹಸಿರುವಲಯಕ್ಕಾಗಿ ಗುರುತಿಸಿ ಹರಾಜು ಮಾಡಲು ಪ್ರಕಟಣೆ ಹೊರಡಿಸುತ್ತಿದ್ದಂತೆ ಸರ್ಕಾರದ ಕೆಲ ಸಚಿವರು ಜಮೀನನ್ನು ಕಬಳಿಸಲು ದಲ್ಲಾಳಿಗಳನ್ನು ಸಿದ್ದಗೊಳಿಸಿಕೊಂಡಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಸಂಖ್ಯೆಗನುಸಾರವಾಗಿ ಮೀಸಲಾತಿ ಹೆಚ್ಚಿಸಲು ಈಗಾಗಲೇ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ಮಾಡಿರುವ ಶಿಫಾರಸ್ಸಿನಂತೆ ಮೀಸಲಾತಿ ಹೆಚ್ಚಸಲು 40 ದಿನಗಳ ಕಾಲ ಕಾಲಾವಕಾಶ ಪಡೆದಿದ್ದ ಮುಖ್ಯಮಂತ್ರಿಗಳು ಕೂಡಲೇ ಪರಿಶಿಷ್ಠ ಜಾತಿಗೆ ಶೇ 20 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 10 ರಷ್ಟು ಮೀಸಲಾತಿ ಹೆಚ್ಚಿಸಬೇಕು.
ಇಲ್ಲವಾದಲ್ಲಿ ಇದೇ ನವೆಂಬರ್ 30 ರೊಳಗೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ನಾಗಪ್ಪ, ಮುಖಂಡರಾದ ಆರ್.ಮುನಿಯಪ್ಪ, ನಗರಸಭೆ ಸದಸ್ಯರಾದ ಅಫ್ಸರ್ಪಾಷ, ಸದಸ್ಯರಾದ ಸಿ.ಮೌಲಾ, ಶಬ್ಬೀರ್ ಹಾಜರಿದ್ದರು.

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!