AVIN TV

Latest Online Breaking News

ರೈತರು ಬೆಳೆಗಾರರಿಗೆ ಮಾದರಿಯಾಗಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಯಶಸ್ವಿನಿ ಹೇಳಿದರು. avintvcom

ಕೃತಕ ನೀರಿನ ಹೊಂಡದಲ್ಲಿ ಪ್ರಾಯೋಗಿಕವಾಗಿ ಸೀಗಡಿ ಕೃಷಿ ನಡೆಸುವ ಮೂಲಕ ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ಜಿಲ್ಲೆಯ ವಿವಿಧ ರೈತರು ಸೇರಿದಂತೆ ಬೆಳೆಗಾರರಿಗೆ ಮಾದರಿಯಾಗಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಯಶಸ್ವಿನಿ ಹೇಳಿದರು.
ಶಿಡ್ಲಘಟ್ಟ ತಾಲೂಕಿನ ಪೂಲಕುಂಟ್ಲಹಳ್ಳಿಯಲ್ಲಿ ಕೃತಕ ಸಿಹಿ ನೀರಿನ ಹೊಂಡಗಳಲ್ಲಿ ಇದೇ ಮೊಟ್ಟ ಮೊದಲ ಭಾರಿಗೆ ಸೀಗಡಿ ಕೃಷಿ ನಡೆಸುತ್ತಿರುವ ರೈತನ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಈ ಹಿಂದೆ ರಾಜ್ಯದ ಕುಮಟಾ ಸೇರಿದಂತೆ ನೆರೆಯ ಆಂದ್ರದ ನಲ್ಲೂರಿನಲ್ಲಿ ಸೀಗಡಿ ಬೆಳೆಸುತ್ತಿದ್ದು ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಭಾರಿಗೆ ಸೀಗಡಿ ಬೆಳೆಸಲು ಮುಂದಾಗಿದ್ದು ಕಳೆದ ನೂರು ದಿನಗಳಲ್ಲಿ ಸುಮಾರು 5000 ಕೆಜಿ ಸೀಗಡಿ ಬೆಳೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯಡಿ ಸೀಗಡಿ ಬೆಳೆಗಾರರಿಗೆ ಬೇಕಾಗಿರುವ ಅಗತ್ಯ ಸವಲತ್ತುಗಳ್ನು ಇಲಾಖೆ ನೀಡಲು ಸಿದ್ದವಾಗಿದೆ ಎಂದರು.
ರೈತ ರಘುನಾಥರೆಡ್ಡಿ ಮಾತನಾಡಿ ಕಳೆದ ಆಗಸ್ಟ್ನಲ್ಲಿ ನಲ್ಲೂರಿನಿಂದ ಎರಡು ಲಕ್ಷ ಮರಿಗಳನ್ನು ತರಿಸಿ ನಮ್ಮ ತೋಟದಲ್ಲಿ ಸುಮಾರು 300 ಅಡಿ ಉದ್ದ ಹಾಗು 100 ಅಡಿ ಅಗಲದ ನೀರಿನ ಹೊಂಡದಲ್ಲಿ ಬಿಡಲಾಗಿತ್ತು. ಇದೀಗ ಸುಮಾರು 5000 ಕೆಜಿಯಷ್ಟು ಸೀಗಡಿ ಬೆಳೆದಿದ್ದೇನೆ. ಸೀಗಡಿ ಕೃಷಿ ಮಾಡುವುದರಿಂದ ಪ್ರತಿಯೊಬ್ಬ ರೈತನು ಆರ್ಥಿಕವಾಗಿ ಮುಂದುವರೆಯಬಹುದು ಎಂದರು.
ಬೆಂಗಳೂರಿನ ಎಬಿಟಿ ಕಾರ್ಪೊರೇಷನ್ನ ವಿಜ್ಞಾನಿ ಡಾ.ವಿಶ್ವನಾಥರೆಡ್ಡಿ ಮಾತನಾಡಿ ನಾನು ಇದೇ ಭಾಗದವನಾಗಿದ್ದು ನಮ್ಮ ಬಯಲುಸೀಮೆ ಭಾಗದಲ್ಲಿ ಸೀಗಡಿ ಬೆಳೆಯಬೇಕು ಎನ್ನುವ ಆಲೋಚನೆ ಬಂದಾಗ ಈ ಭಾಗದ ರೈತ ರಘುನಾಥರೆಡ್ಡಿ ಮುಂದೆ ಬಂದು ಪ್ರಾಯೋಗಿಕವಾಗಿ ಸೀಗಡಿ ಬೆಳೆಯಲು ಮುಂದಾಗಿದ್ದು ಕಳೆದ ನೂರು ದಿನಗಳಲ್ಲಿ ಸುಮಾರು 5000 ಕೆಜಿಯಷ್ಟು ಸೀಗಡಿ ಬೆಳೆಯುವ ಮೂಲಕ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ತಾಲೂಕಿನ ಮತ್ತಷ್ಟು ರೈತರೊಂದಿಗೆ ಸೀಗಡಿ ಬೆಳೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೀನುಗಾರಿಕೆÉ ಇಲಾಖೆಯ ಸಹಾಯಕ ನಿರ್ದೇಶಕ ಭರತ್, ಗ್ರಾಮಸ್ಥರಾದ ಆನಂದರೆಡ್ಡಿ, ರವಿ, ಮತ್ತಿತರರು ಹಾಜರಿದ್ದರು.
ತಾಲೂಕಿನ ಪೂಲಕುಂಟ್ಲಹಳ್ಳಿಯಲ್ಲಿ ಕೃತಕ ಸಿಹಿ ನೀರಿನ ಹೊಂಡಗಳಲ್ಲಿ ಇದೇ ಮೊಟ್ಟ ಮೊದಲ ಭಾರಿಗೆ ಸೀಗಡಿ ಕೃಷಿ ನಡೆಸುತ್ತಿರುವ ರೈತನ ಜಮೀನಿಗೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಯಶಸ್ವಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!