AVIN TV

Latest Online Breaking News

ಶ್ರೀಮತಿ ಪವಿತ್ರ ರಾಮಯ್ಯ ಪ್ರಾಧಿಕಾರದ ಕಛೇರಿಯಲ್ಲಿ ಯೋಜನೆಯ ಸಂಬಂಧ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.avintvcom

Featured Video Play Icon

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಇಂದು ಪ್ರಾಧಿಕಾರದ ಕಛೇರಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಸಂಬಂಧ ಪಟ್ಟ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಕಾಡ ಅಧ್ಯಕ್ಷರು ಅಧಿಕಾರಿಗಳಿಂದ ಯಾವೆಲ್ಲ ಯೋಜನೆಗಳು ಜಾರಿಯ ಹಂತದಲ್ಲಿದೆ, ಮುಂದಿನ ಹಂತದ ಯೋಜನೆಗಳ ಬಗ್ಗೆ ವಿಸ್ತಾರವಾದ ಮಾಹಿತಿ ಪಡೆದುಕೊಂಡರು.
ಇದರೊಂದಿಗೆ ಮೇಲ್ದಂಡೆ ಯೋಜನೆಯಿಂದ ಯಾವೆಲ್ಲ ಕೆರೆ ತುಂಬಿಸುವ ಯೋಜನೆ ಜಾರಿಯಲ್ಲಿದೆ ಎಂಬ ಮಾಹಿತಿ ಪಡೆದರು ಜೊತೆಗೆ ಕಳೆದ ವಾರ ಅಜ್ಜಂಪುರ ತಾಲೂಕಿನ ಎಚ್.ತಿಮ್ಮಾಪುರ ಗ್ರಾಮಕ್ಕೇ ಭೇಟಿ ನೀಡಿದಾಗ ರೈತರು ತಮ್ಮ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ವಿಚಾರವನ್ನು ಆದ್ಯತೆ ಮೇರೆಗೆ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು ಮುಂದುವರೆದು..ಜಲಾಶಯದಲ್ಲಿ ಸದ್ಯದ ನೀರಿನ ಲಭ್ಯತೆ ಬಗ್ಗೆ ಮಾಹಿತಿ ಪಡೆದು ಬಯಲು ಸೀಮೆಯ ಪ್ರದೇಶಗಳ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅ ಭಾಗಗಳ ಅನ್ನದಾತರಿಗೆ ಬೆಳೆ ಬೆಳೆಯಲು ಅನುವು ಮಾಡಿಕೊಡುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಿ ಬದುಕಲು ಅನುಕೂಲ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಇದರೊಂದಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ತಾಲೂಕಿನ ವಾಣಿ ವಿಲಾಸ ಜಲಾಶಯದ ಸಂಪೂರ್ಣ ಮಾಹಿತಿ ಆಲಿಸಿದರು ಹಾಗೂ ಮುಂದಿನ ಬೇಸಿಗೆ ಬೆಳೆ ಬೆಳೆಯಲು ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜೊತೆಗೆ ರೈತರ ಸಮಸ್ಯೆಗಳ ಬಗ್ಗೆ ಶಾಂತ ರೀತಿಯಿಂದ ಅಲಿಸುವಂತೆ, ಅವರ ಸಮಸ್ಯೆಗಳನ್ನು ಶೀಘ್ರ ವಾಗಿ ಪರಿಹರಿಸಿ ಕೊಡುವಂತೆ, ಸೂಕ್ತ ರೀತಿಯಲ್ಲಿ ಗೌರವಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ರೈತರಿಗೆ ಗೌರವ ನೀಡಿದರೆ ನನಗೆ ಗೌರವಿಸಿದಂತೆ, ಅವರಿಗೆ ಅವಮಾನ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಸೂಚಿಸಿದರು. ರೈತ ಹೋರಾಟದ ಮೂಲಕ, ಅವರ ಸಮಸ್ತ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿತು ಬಂದಿರುವ ನನ್ನ ಮೇಲೆ ರೈತರಿಗೆ ಅಪಾರವಾದ ನಿರೀಕ್ಷೆ ಇದ್ದು ನೀವು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುವಂತೆ, ಸೂಕ್ತವಾಗಿ ಸ್ಪಂದಿಸುವಂತೆ ಸೂಚನೆ ಕೊಟ್ಟರು.
ಈ ಸಭೆಯಲ್ಲಿ ಕಾಡ ನಿರ್ದೇಶಕರಾದ ಷಡಾಕ್ಷರಿ ಅವರು, ರುದ್ರಮೂರ್ತಿ ಅವರು,ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಎಚ್.ಬಸವರಾಜಪ್ಪ ಅವರು, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ರಾಘವನ್ ಅವರು, ಭದ್ರಾ ಕಾಡ ಆಡಳಿತಾಧಿಕಾರಿ ಕೃಷ್ಣಮೂರ್ತಿ ಅವರು, ಹಾಗೂ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!