AVIN TV

Latest Online Breaking News

ಹುಬ್ಬಳ್ಳಿಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ avintvcom

Featured Video Play Icon

ಹುಬ್ಬಳಿ, ಉಣಕಲ್
ವಿಶೇಷ ಮಕ್ಕಳೊಂದಿಗೆ ಕಳೆದಿರುವ ಕ್ಷಣ ಅವಿಸ್ಮರಣೀಯ

ವಿಶೇಷಚೇತನರು ದೇವರು ಮಕ್ಕಳು. ಎಷ್ಟೋ ಕಡೆ ಮಕ್ಕಳು ದಿವ್ಯಾಂಗರಾಗಿದ್ದಾರೆ ಎಂದು ಹೆತ್ತವರು ಆಶ್ರಮಗಳಿಗೆ ಸೇರಿಸುತ್ತಿದ್ದಾರೆ. ಆದರೆ ಇಂತಹ ವಿಶೇಷ ಮಕ್ಕಳ ವಿಕಸನಕ್ಕೆ ಶ್ರಮಿಸಲು ಅವಕಾಶ ಸಿಕ್ಕಿರುವುದು ಭಾಗ್ಯವೇ ಸರಿ.

ವಿಶೇಷ ಮಕ್ಕಳ ಆತ್ವವಿಶ್ವಾಸ ಹೆಚ್ಚಿಸುವ ಸಲುವಾಗಿ ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಮನೋವಿಕಲ ಬಾಲಕಿಯರ ಬಾಲಮಂದಿರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಬಳಿಕ ಮುಗ್ಧ ಮನಸುಗಳ ಕುಶಲೋಪರಿ ವಿಚಾರಿಸಿದರು. ನಂತರ ಹುಟ್ಟುಹಬ್ಬದ ನಿಮಿತ್ತವಾಗಿ ವಿಶೇಷಚೇತನ ಮಕ್ಕಳ ಬಾಳು ಎಂದಿಗೂ ಬೆಳಕಾಗಿರಬೇಕೆಂದು ಬಟ್ಟೆ, ಸಿಹಿ ತಿಂಡಿಗಳನ್ನು ಉಡುಗೊರೆಯಾಗಿ ನೀಡಿದರು. ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ವೀಕ್ಷಿಸಿ, ಅವರ ಪ್ರತಿಭೆ ಉತ್ತುಂಗದ ಶಿಖರಕ್ಕೇರಲಿ ಎಂದು ಹಾರೈಸಿದರು.

ನಂತರ ಮಕ್ಕಳಿಗೆ ಕೈಕುತ್ತು ನೀಡಿದಾಗ ಅವರು ಭಾವುಕರಾಗಿದ್ದನ್ನು ಕಂಡು ತಾಯಿ ಪ್ರೀತಿಯ ಮುಂದೆ ಎಲ್ಲವೂ ನಗಣ್ಯ ಎಂದೆನಿಸಿತು. ತಾಯಿ ಪ್ರೀತಿಯಿಂದ ದೂರವಿರುವ ಈ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ತೋರಿದಾಗ ಅವರ ಮುಖದಲ್ಲಿ ಅರಳಿದ ನಗು ನೋಡಿ ಒಂದು ಕ್ಷಣ ಭಾವುಕಳಾದೆ. ನಂತರ ಮಕ್ಕಳೊಂದಿಗೆ ಬೆರೆತು ಆಗಸಕ್ಕೆ ಆಕಾಶಬುಟ್ಟಿ ಹಾರಿಸುವ ಮೂಲಕ ಅವರ ಸಂತೋಷದಲ್ಲಿ ಭಾಗಿಯಾಗಿದೆ. ಬಳಿಕ ಬಾಲಮಂದಿರಲ್ಲೇ ವಾಸ್ತವ್ಯ ಹೂಡಲಾಯಿತು. ಇದು ಜೀವನದ ಅವಿಸ್ಮರಣೀಯ ದಿನವಾಗಿದ್ದು, ಈ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಜನ್ಮ ಸಾರ್ಥಕ ಎಂದೆನಿಸಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಶ್ರೀ ಈರಣ್ಣ ಜಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸಾಲಗಟ್ಟಿ, ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

हुबळी, उणकल
विशेष मुलांसमवेत घालवलेला अविस्मरणीय क्षण.

दीव्यांग मुले ही देवाची मुले आहेत. कित्येका कडे मुले अपंग आहेत म्हणून कित्येक आई-वडिल मुलांना आश्रमात पाठवत आहेत. परंतु माझे भाग्य आहे की अशा विशेष मुलांच्या विकासासाठी काम करण्याची संधी मिळाली आहे.

विशेष मुलांचा आत्मविश्वास वाढविण्यासाठी, हुबळीच्या उणकल येथील मनोविकार बालक केंद्राला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भेट देऊन, तेथील सुख सुविधांचा आढावा घेतला नंतर मुलांची विचारपूस केली. वाढदिवसाच्या निमित्ताने दिव्यांग मुलांचे जीवन चांगले जावे म्हणून कपडे आणि मिठाई भेट दिली. मुलांनी बनवलेल्या हस्त्वस्तुंची पाहणी करुन, त्यांची प्रतिभा उत्तुंग भरारी घेऊ अश्या शुभेच्छा दिल्या

जेव्हा मुलांना अन्न भरविले तेंव्हा ते भावनिक असल्याचे समजून घेऊन आईच्या प्रेमापुढे सर्व काही नगण्य आहे असे समजले. आईच्या प्रेमापसून दूर असलेल्या या मुलांना प्रेम आपुलकी दाखविल्यावर त्यांच्या चेहऱ्यावरील आनंद पाहून क्षणभर भावूक झाले. नंतर मुलांच्या बरोबर खेळत त्यांच्या आनंदात सामील झाले. त्यानंतर बालमंदिरातच राहिले. हा आयुष्यातील अविस्मरणीय दिवस होता आणि या विभागात सेवा केल्याने जन्म सार्थक झाला असे सांगितले.

यावेळी कर्नाटक बालिकाकास अकॅडमीचे श्री ईरण्ण जडी, जिल्हा बालकल्याण समितीच्या अध्यक्षा सौ. राजेश्वरी सालगट्टी, विभाग अधिकारी व मान्यवर उपस्थित होते.

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!