AVIN TV

Latest Online Breaking News

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನೇತೃತ್ವದಲ್ಲಿ, 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ avintvcom

Featured Video Play Icon

ಬೆಳಗಾವಿ
ಸಹಕಾರ ಕ್ಷೇತ್ರ ಅಭಿವೃದ್ಧಿಯ ಪ್ರೇರಕ ಶಕ್ತಿ

ಬೆಳಗಾವಿಯಲ್ಲಿ,“ಕೋರೊನಾ ಸೋಂಕು-ಆತ್ಮ ನಿರ್ಭರ ಭಾರತ ಸಹಕಾರ ಸಂಸ್ಥೆಗಳು” ಎಂಬ ಧ್ಯೇಯದೊಂದಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನೇತೃತ್ವದಲ್ಲಿ, 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು, ಸಹಕಾರ ಸಚಿವರಾದ ಶ್ರೀ ಎಸ್.ಟಿ ಸೋಮಶೇಖರ್ ಜಿ, ಹಾಗೂ ಪಶುಸಂಗೋಪನಾ ಇಲಾಖಾ ಸಚಿವರಾದ ಶ್ರೀ ಪ್ರಭು ಚವ್ಹಾಣ ಜಿ, ಅವರ ಜತೆಗೂಡಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಸತ್ಕಾರ ಸ್ವೀಕರಿಸಿ, ಸಾಧಕರನ್ನು ಸನ್ಮಾನಿಸಿ, ಮಾತನಾಡಿದರು. ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘಗಳಿಗೆ ಚೆಕ್ ವಿತರಿಸಿದರು.

ಸಹಕಾರ ಕ್ಷೇತ್ರದಿಂದ ಗ್ರಾಮಿಣ ಅಭಿವೃದ್ಧಿ ಸಾಧ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರವು ಗುರುತಿಸಿಕೊಂಡಿದ್ದು, ಇಫ್ಕೋ ಹಾಗೂ ಕ್ರಿಬ್ಕೋ ಸಹಕಾರ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಸಾಧನೆ ಮಾಡಿವೆ. ಬೆಳಗಾವಿ ಕೂಡ ಸಹಕಾರಿ ರಂಗದಲ್ಲಿ ಮುಂಚೂಣಿಯಲ್ಲಿದೆ. ಸ್ತ್ರೀ ಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಸಾಲ, ತರಬೇತಿ, ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಶ್ರೀ ಅನಿಲ್ ಬೆನಕೆ, ಜಿ.ಪಂ.ಅಧ್ಯಕ್ಷರಾದ ಆಶಾ ಐಹೊಳೆ ಹಾಗೂ ಸಹಕಾರ ಸಂಘಗಳ ನಿಬಂಧಕರು, ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

बेळगावी
सहकार क्षेत्र विकासाची प्रेरणा शक्ती.

बेळगावी येथे “कोरोना संसर्ग-आत्म निर्भर भारत सहकार संस्था” या उद्देशाने कर्नाटक सहकारी दूध उत्पादक महासंघाच्या नेतृत्वाखाली 67व्या अखिल भारतीय सप्ताह सोहळा सहकार मंत्री श्री एस.टी सोमशेखर जी, आणि पशुसंवर्धन मंत्री श्री प्रभु चव्हाण जी, यांच्याबरोबर राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी ध्वजारोहण करून, कार्यक्रम उद्घाटन केले व सन्मान करून संबोधित केले. याच दरम्यान दूध उत्पादक संघांना धनादेश वाटप केले.

सहकारी क्षेत्रातून ग्रामीण विकास शक्य आहे. सहकारी क्षेत्राची आंतरराष्ट्रीय स्तरावर मान्यता असून इफ्को व क्रिब्को सहकारी संस्थांनी चांगली कामगिरी केली आहे. बेळगावी जिल्हा हे सहकार क्षेत्रातही अग्रगण्य आहे. स्त्री शक्ती संघांना, बचतगटांना महिला व बालविकास विभागाच्या वतीने विशेष पत, प्रशिक्षण व बाजारपेठ सुविधा पुरविल्या आहेत व महिलांनी त्याचा लाभ घ्यावा, असे सल्ला दिले.

या कार्यक्रमास राज्यसभेचे सदस्य श्री ईरण्ण कडाडी, केएमएफचे अध्यक्ष श्री बालचंद्र जारकीहोळी, आमदार श्री अनिल बेनके, जिल्हा पंचायत अध्यक्षा सौ आशा ऐहोळे, आणि सहकार संघाचे निबंधक, मान्यवर व लोकप्रतिनिधी उपस्थित होते.

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!