AVIN TV

Latest Online Breaking News

ಬೀದರ್ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ವಿಶ್ವ ವಿದ್ಯಾಲಯದ ನಿರ್ದೇಶಕ ದೀಪಕ್ ದೊಡ್ಡಯ್ಯ ತಿಳಿಸಿದರು. avintvcom

Featured Video Play Icon

ಕನ್ನಡ ಭಾಷೆ ಉಳಿಸಿ ಬೆಳೆಸಲು ಕನ್ನಡಿಗರೆಲ್ಲಾ ಮುಂದಾಗಬೇಕು: ದೀಪಕ್ ದೊಡ್ಡಯ್ಯ
ಮೂಡಿಗೆರೆ: ಕರ್ನಾಟಕದಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಸರಕಾರವನ್ನೇ ಅವಲಂಭಿಸದೇ ಕನ್ನಡಿಗರು ಎಲ್ಲಾ ವಿಭಾಗದಲ್ಲೂ ಶಸ್ತ್ರರಹಿತ ಹೋರಾಟದ ಮೂಲಕ ಕರ್ನಾಟಕದ ಏಕೀಕರಣಕ್ಕೆ ದಕ್ಕೆ ಬರದಂತೆ ಕಾಪಾಡಿಕೊಳ್ಳಬೇಕೆಂದು ಬೀದರ್ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ವಿಶ್ವ ವಿದ್ಯಾಲಯದ ನಿರ್ದೇಶಕ ದೀಪಕ್ ದೊಡ್ಡಯ್ಯ ತಿಳಿಸಿದರು.
ಅವರು ಮಂಗಳವಾರ ಗೋಣಿಬೀಡಿನ ಸಾವಿತ್ರಮ್ಮ ರಾಜಣ್ಣ ಮಿನಿ ಹಾಲ್ನಲ್ಲಿ ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಟಾನ, ತಾಲೂಕು ಕಸಾಪ ಹಾಗೂ ಜೇಸಿಐ ನಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕನ್ನಡದ ಸ್ಥಾನಮಾನ ಕಾಪಾಡಿಕೊಳ್ಳಲು ಕನ್ನಡಿಗರು ಹರಸಾಹಸ ಪಡುತ್ತಿರುವುದು ದುರಂತಮಯ. ಸರಕಾರ ಕನ್ನಡದ ಉಳಿವಿಗೆ ಹಲವು ಯೋಜನೆ ರೂಪಿಸಿ ಕನ್ನಡಿಗರ ಕೈಗೆ ನೀಡಿದೆ. ಅದನ್ನು ಬಳಸಿ ಕನ್ನಡದ ಉಳಿವಿಗೆ ಶ್ರಮಿಸುವಂತೆ ಕರೆ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಕೊರೊನಾ ಸೋಂಕಿನ ಕಾರಣ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಜನತೆ ಸರಳವಾಗಿ ಆಚರಿಸಬೇಕಾಗಿರುವುದರಿಂದ ಜನರಲ್ಲಿ ಲವಲವಿಕೆ ಇಲ್ಲದಂತಾಗಿದೆ. ಈ ಕಾರಣಕ್ಕೆ ಕನ್ನಡ ಭಾಷೆ ಮೇಲೆ ಹಿಡಿತ ಸಾಗಿಸಿ ತೊಂದರೆ ನೀಡಲು ಕನ್ನಡೇತರರು ಮುಂದಾದರೆ ಅದಕ್ಕೆ ಬೆಳಗಾವಿಯಲ್ಲಿ ಕನ್ನಡಿಗರು ತಕ್ಕ ಉತ್ತರ ನೀಡಿದ್ದಾರೆಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಎಸ್.ರಘು ಕಾರ್ಯಕ್ರಮ ಉದ್ಘಾಟಿಸಿದರು. ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಟಾನದ ಅಧ್ಯಕ್ಷೆ ಉಮಾ ಮೋಹನ್ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಡಿ.ಎಂ.ಮಂಜುನಾಥಸ್ವಾಮಿ, ಜೇಸಿಐ ಅಧ್ಯಕ್ಷ ಎಚ್.ಆರ್.ಹರಿಶ್, ಮೋಹನ್ ರಾಜಣ್ಣ, ಗಾಯಕ ಬಕ್ಕಿ ಮಂಜುನಾಥ್, ಪ್ರತಿಮಾ, ಸಿ.ಸಿ.ರಾಜಣ್ಣ, ಭಕ್ತೇಶ್, ಕೆ.ಡಿ.ಸುರೇಶ್, ಸತ್ಯಕುಮಾರ್, ರಂಜಿತ್, ಕಾವ್ಯ, ಕವನ, ವಸಂತ ಹಾರ್ಗೋಡ್, ಸುರಭಿಜೈನ್ ಮತ್ತಿತರರಿದ್ದರು.

 

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!