ಸರಕಾರಕ್ಕೆ ಮೋಸ ಮಾಡಿ ಕೂಲಿ ಮಾಡುವ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ ಮಿಡಿಗೇಶಿ ಗ್ರಾಮ ಪಂಚಾಯಿತಿ.avintvcom

ನರೇಗಾ ಕಾಮಗಾರಿಗೆ ಯಂತ್ರಗಳ ಬಳಕೆ,
ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಕೂಲಿ ಮಾಡುವ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ,
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯ ಅಡಿಯಲ್ಲಿ ಸರಕಾರಕ್ಕೆ ಮೋಸ ಮಾಡಿ ಕೂಲಿ ಮಾಡುವ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ ಮಿಡಿಗೇಶಿ ಗ್ರಾಮ ಪಂಚಾಯಿತಿ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೈಲಾಂಜನೇಯ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಎರಡನೇ ಹಂತದ ಕೌಂಟರ್ ಬಂಡ್ ನಿರ್ಮಾಣ ಎಂಬ ಹೆಸರಿನ ಕಾಮಗಾರಿಯಲ್ಲಿ
ಕೂಲಿ ಕಾರ್ಮಿಕರ ಬದಲಿಗೆ ಜೆಸಿಬಿ ಯಂತ್ರಗಳಿಂದ ಕಾಮಗಾರಿ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ನರೇಗಾ ಯೋಜನೆಯಡಿ 3 ಲಕ್ಷ ರುಪಾಯಿ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರನ್ನು ಬಳಸಬೇಕೆಂಬ ನಿಯಮ ಉಲ್ಲಂಘಿಸಿ ಜೆಸಿಬಿ ಯಂತ್ರಗಳ ಬಳಕೆ ಯಾಗಿದೆ.
ಕಾರ್ಮಿಕರ ಬದಲಿಗೆ ಯಂತ್ರೋಪಕರಣ ಬಳಸುತ್ತಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧಿಕಾರಿಗಳು ಮಾತ್ರ ಕೆಲವು ರಾಜಕೀಯ ಮುಖಂಡರೊಂದಿಗೆ ಶಾಮೀಲಾಗಿ ಯಂತ್ರಗಳ ಮೂಲಕ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.