ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪೊಲೀಸ್ ಠಾಣೆಯಲ್ಲಿ ಎರಡು ಪಿಎಸ್ಐ ಹುದ್ದೆ ಇರುತ್ತದೆ. avintvcom

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪೊಲೀಸ್ ಠಾಣೆಯಲ್ಲಿ ಎರಡು ಪಿಎಸ್ಐ ಹುದ್ದೆ ಇರುತ್ತದೆ. ಆದರೆ ಇಷ್ಟು ದಿನ ಒಬ್ಬರೇ ಪಿಎಸ್ಐ ಇರುತ್ತಾ ಬಂದಿದ್ದರು ಆದರೆ ಈಗ ಇನ್ನೊಂದು ಪೋಸ್ಟಿಗೆ ದಿನಾಂಕ 6/11/20 ರಂದು ಭರ್ತಿಯಾಗಿದ್ದು ನಮ್ಮೆಲ್ಲರಿಗೂ ಖುಷಿ ತಂದಿದೆ ಎಂದು ಕಲಗುರ್ಕಿ ಗ್ರಾಮದ ಗುರುಹಿರಿಯರು ಇಂದು ಮುಂಜಾನೆ 11 ಗಂಟೆ ಸುಮಾರಿಗೆ 2 ವಾಹನ ಮಾಡಿಕೊಂಡು ಬಂದು ಹೊಸದಾಗಿ ಬಂದಿರುವ ಪಿಎಸ್ಐ ಶ್ರೀ ರಾಜು ಮಮದಾಪುರ ಸರ್ ಗೆ ಹಾಗೂ ಪಿಎಸ್ಐ ಶ್ರೀ ಎನ ಬಿ ಶೀವುರ್ ಸರ್ ಗೆ ಶಾಲು ಹೊದಿಸಿ ಸನ್ಮಾನ ಮಾಡಿ ಸಿಹಿ ಹಂಚಲಾಯಿತು. ಕಲಗುರ್ಕಿ ಗ್ರಾಮದ ಹಿರಿಯರಾದ ದಯಾನಂದ್ ಹಿರೇಮಠ್, ಅಶೋಕ ಆಸಂಗಿ, ಅಜಿತ್, ವೀರೇಶ್, ಪರಸು ,ರಾಜು ,ಹಾಗೂ ಪೊಲೀಸ್ ಸಿಬ್ಬಂದಿ ಅವರಿದ್ದರು.
ವರದಿ ಮಲ್ಲಿಕಾರ್ಜುನ ಬುರ್ಲಿ