AVIN TV

Latest Online Breaking News

ಬಸವಣ್ಣನವರ ತತ್ವ, ಸಿದ್ಧಾಂತ ನಮ್ಮೆಲ್ಲರಿಗೂ ಅನುಕರಣೀಯ. avintvcom

Featured Video Play Icon

ಯಕ್ಸಂಬಾ

ಬಸವಣ್ಣನವರ ತತ್ವ, ಸಿದ್ಧಾಂತ ನಮ್ಮೆಲ್ಲರಿಗೂ ಅನುಕರಣೀಯ.

ಯಕ್ಸಂಬಾ ಪಟ್ಟಣದಲ್ಲಿ, ಶ್ರೀ ಬಸವ ಪ್ರತಿಷ್ಠಾನ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಜಗಜ್ಯೋತಿ ಶ್ರೀ ಬಸವಣ್ಣನವರ ಪ್ರತಿಮೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಮಾಲಾರ್ಪಣೆ ಮಾಡುವ ಮೂಲಕ ಅನಾವರಣ ಮಾಡಿ, ಸತ್ಕಾರ ಸ್ವೀಕರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ನೀಡಸೋಸಿ ಸಿದ್ದಸಂಸ್ಥಾನ ಮಠದ ಪ.ಪೂ. ಶ್ರೀ ಮನ್ನಿರಂಜನ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿಗಳು ಹಾಗೂ ಕನ್ನೇರಿಯ ಪರಮಪೂಜ್ಯ ಶ್ರೀ ಮುಪ್ಪಿನ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳು ವಹಿಸಿದ್ದರು.

ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದ್ದವರು ಜಗಜ್ಯೋತಿ ಶ್ರೀ ಬಸವಣ್ಣನವರು. ಮಹಿಳೆಯರು ಕೂಡ ಶಿಕ್ಷಣ ಪಡೆಯಬೇಕು ಹಾಗೂ  ಜಾತಿ ಪದ್ಧತಿಯನ್ನು ಹೋಗಲಾಡಿಸಲು ಅವರು ಮಾಡಿದ ಸಮಾಜಕಾರ್ಯ ಎಂದೆಂದಿಗೂ ಅಜರಾಮರ. ಇಂತಹ ಮಹಾನ್ ಚೇತನರ ತತ್ವ, ಸಿದ್ಧಾಂತಗಳು ಇಂದಿನ ಯುವಜನತೆಗೆ ಪರಿಚಯವಾಗಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ ಕವಟಗಿಮಠ, ಊರಿನ ಗಣ್ಯರು, ಜನಪ್ರತಿನಿಧಿಗಳು, ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

यक्संबा

बसवेश्वर महाराजांचे तत्वज्ञान आणि सिद्धांत आपल्या सर्वांसाठी अनुकरणीय आहेत.

यक्संबा शहरात श्री बसव प्रतिष्ठान समितीच्यावतीने नवीन बांधलेल्या श्री बसवेश्वर महाराजांच्या पुतळ्याला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी आणि बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी पुष्पहार अर्पण करून, अनावरण केले व सत्कार स्वीकारून, कार्यक्रमास उद्देशून संबोधित केले.

या कार्यक्रमाचे पावन सानिध्यात निडसोसी सिद्धसंस्थान मठाचे परमपूज्य श्री मन्निरंजन जगद्गुरु पंचम शिवलिंगेश्वर महास्वामीजी आणि कन्नेरीच्या परमपूज्य श्री मुप्पीन काडसिधेश्वर महास्वामीजी उपस्थित होते.

सामाजिक अडचणी दूर करण्यासाठी वचनांच्या माध्यमातून सामाजिक जागृत करणारे जगज्योती बसवेश्वर महाराज. महिलांनाही शिक्षण दिले पाहिजे आणि जातीव्यवस्थेपासून मुक्त होण्यासाठी त्यांनी केलेले सामाजिक कार्य अजरामर आहे. अशा महान व्यक्तींची तत्त्वे आणि सिद्धांत आजच्या तरूणांपर्यंत पोहोचवणे गरजेचं आहे असे सांगितले.

या कार्यक्रमास विधान परिषदेचे मुख्य व्हीप श्री महांतेश कवटगीमठ,  मान्यवर, लोकप्रतिनिधी व स्थानिक नागरिक उपस्थित होते

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!