ಬಿಜೆಪಿ ಜಿಲ್ಲಾಧ್ಯಕ್ಷರಿಂದ ಸೈನಿಕರ ಮನೆಯಲ್ಲಿ ದೀಪಾವಳಿ ಆಚರಣೆ. avintvcom

ಬಿಜೆಪಿ ಜಿಲ್ಲಾಧ್ಯಕ್ಷರಿಂದ ಸೈನಿಕರ ಮನೆಯಲ್ಲಿ ದೀಪಾವಳಿ ಆಚರಣೆ.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ರವರು ದೆಹಲಿ ಸೇನಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರ್ ನರೇಶ್ ಬಾಬುರವರ ಮನೆಯಲ್ಲಿ ಅವರ ತಂದೆ ಶ್ರೀಕಾಂತ್ ರಾವ್, ಅವರ ತಾಯಿ ಗಾಯತ್ರಿರವರನ್ನು ಗೌರವಿಸಿ ಸೈನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಪುರಸಭಾ ಅಧ್ಯಕ್ಷರಾದ
ಪ್ರಸಾದ್ ಕುಮಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಂಡಲ ಉಪಾಧ್ಯಕ್ಷರುಗಳಾದ ಲಕ್ಷ್ಮಣ ಪೂಜಾರಿ, ಅಜಯ್ ರೈ, ಕಾರ್ಯದರ್ಶಿ ಕಿಶೋರ್, ಕೋಶಾಧಿಕಾರಿ ಹರೀಶ್ ಎಂ.ಕೆ. ಪುರಸಭಾ ಸದಸ್ಯರುಗಳಾದ ರಾಜೇಶ್ ನಾಯಕ್, ಸ್ವಾತಿ ಪ್ರಭು, ಪ್ರಮುಖರಾದ ಆಕಾಶ್ ಸುವರ್ಣ, ಸಾತ್ವಿಕ್ ಮಲ್ಯ, ವಿಕ್ರಂ ಪ್ರಭು, ಶಿವಾನಂದ ಪ್ರಭು,
ಪ್ರದೀಪ್ ಭಟ್, ಗಣೇಶ್ ಕಾಮತ್ ಉಪಸ್ಥಿತರಿದ್ದರು