AVIN TV

Latest Online Breaking News

ರವಿ ಬೆಳಗೆರೆ ನಿಧನ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ ಇವರ ಆತ್ಮಕ್ಕೆ ಶಾಂತಿ ಸಿಗಲಿ

ರವಿ ಬೆಳಗೆರೆ ನಿಧನ ಹೃದಯಾಘಾತದಿಂದ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ ಇವರ ಆತ್ಮಕ್ಕೆ ಶಾಂತಿ ಸಿಗಲಿ

ಭಾವಪೂರ್ಣ_ಶ್ರದ್ಧಾಂಜಲಿ 🙏🙏

ಅಕ್ಷರಗಳ ಮಾಂತ್ರಿಕ ಹಾಯ್ ಬೆಂಗಳೂರು ಸಂಸ್ಥಾಪಕರಾದ ಹಿರಿಯ ಪತ್ರಕರ್ತರಾದ ಬಾಸ್ ಶ್ರೀ‌ ರವಿ ಬೆಳಗೆರೆ ಇನ್ನಿಲ್ಲ.
ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏🙏.

1995ರಲ್ಲಿ ಹಾಯ್​ ಬೆಂಗಳೂರು ವಾರ ಪತ್ರಿಕೆಯನ್ನು ಆರಂಭಿಸಿದ ರವಿ ಬೆಳಗೆರೆ ಅವರು ಕಾದಂಬರಿ, ಅನುವಾದ, ಕಥಾಸಂಕಲನ, ಅಂಕಣ ಬರಹಗಳು, ಜೀವನಕಥನ ಸೇರಿ 70ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಂಡಿವೆ.

ಹಾಯ್​ ಬೆಂಗಳೂರು ಟ್ಯಾಬ್ಲಾಯಿಡ್​ ಪತ್ರಿಕೆಯ ಸಂಪಾದಕ ಹಾಗೂ ಲೇಖಕ ರವಿ ಬೆಳಗೆರೆ ಇಂದು ಬೆಳಗಿನ ಜಾವ ಕನಕಪುರ ರಸ್ತೆಯಲ್ಲಿರುವ ತಮ್ಮ ನಿವಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಡರಾತ್ರಿ ಹೃದಯಾಘಾತವಾದಾಗ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಇಬ್ಬರು ಹೆಂಡತಿಯರು, ಇಬ್ಬರು ಹೆಣ್ಣು ಮತ್ತು ಗಂಡು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇವರ ಪಾರ್ಥೀವ ಶರೀರವನ್ನು ಅವರ ನಿವಾಸಕ್ಕೆ ತರಲಾಗಿದೆ.

ಬಳ್ಳಾರಿ ಜಿಲ್ಲೆಯ ಒಬ್ಬ ಸಾಮಾನ್ಯ ಬಡ ಕುಟುಂಬದಿಂದ ಬಂದ ರವಿ ಬೆಳಗೆರೆ, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಸ್ಟೈಲ್​ ನಿಂದ ಹೆಸರು ಗಳಿಸಿದ್ದವರು. ಅವರ ಅನೇಕ ಕೃತಿಗಳು ಇಂದಿಗೂ ಬೇಡಿಕೆಯಲ್ಲಿವೆ. ಅವರ ಹಾಯ್​ ಬೆಂಗಳೂರು ಪತ್ರಿಕೆಯು ಭೂಗತ ಲೋಕದ ಕಥೆಗಳನ್ನು ಹಸಿ ಹಸಿಯಾಗಿ ಕಟ್ಟಿಕೊಡುತ್ತಿದ್ದ ರವಿ ಅವರು ಮಾಂಡೋವಿ, ಭೀಮತೀರದ ಹಂತಕರು, ಪಾಪಿಗಳ ಲೋಕದಲ್ಲಿ, ಇಂದಿರೆಯ ಮಗ ಸಂಜಯ, ಸೇರಿದಂತೆ ಅನೇಕ ಕೃತಿಗಳನ್ನು ಬರೆದಿದ್ದಾರೆ.  ಇವರ ಪಾರ್ಥೀವ ಶರೀರವನ್ನು ಅವರೇ ಕಟ್ಟಿ ಬೆಳೆಸಿದ ಪ್ರಾರ್ಥನಾ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದಾಗಿ ತಿಳಿದುಬಂದಿದೆ.
ಇವರು ಕೇವಲ ಪತ್ರಕರ್ತರಾಗಿರದೆ ಟಿವಿ ಮಾಧ್ಯಮದಲ್ಲಿ ನಿರೂಪಕರಾಗಿ, ಅನೇಕಾ ಕಾರ್ಯಕ್ರಮಗಳಲ್ಲಿ ವಾಗ್ಮಿಗಳಾಗಿ ಭಾಗವಹಿಸಿ ಜನಮೆಚ್ಚುಗೆ ಪಡೆದುಕೊಂಡಿದ್ದರು. ಇವರು ಮಾತನಾಡುತ್ತಿದ್ದರೆ ಲಕ್ಷಾಂತರ ಮಂದಿ ಕೇಳುತ್ತಿದ್ದರು.

 

 

 

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!