ಕಾಲ ಭೈರವೇಶ್ವರ ದೇವಸ್ಥಾನ ಹಾಗೂ ಕಾಲ ಭೈರವೇಶ್ವರ ಮಹಿಳಾ ಘಟಕದ ಆಶ್ರಯದಲ್ಲಿ ಗಣ್ಯರಿಗೆ ಗೌರವ ಸಮರ್ಪಣೆ avintvcom

ದಿನಾಂಕ 11/11/2020 ರಂದು, ಭದ್ರಾವತಿ ನಗರದಲ್ಲಿರುವ ಬಂಟರ ಸಭಾ ಭವನದಲ್ಲಿ ನಡೆದ ಶ್ರೀ ಕಾಲ ಭೈರವೇಶ್ವರ ಚಾರಿಟೇಬಲ್ ಟ್ರಸ್ಟ್, ಕಾಲ ಭೈರವೇಶ್ವರ ದೇವಸ್ಥಾನ ಟ್ರಸ್ಟ್ ಹಾಗೂ ಕಾಲ ಭೈರವೇಶ್ವರ ಮಹಿಳಾ ಘಟಕದ ಸಂಯುಕ್ತ ಆಶ್ರಯದಲ್ಲಿ ಗಣ್ಯರಿಗೆ ಗೌರವ ಸಮರ್ಪಣೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೃದಯ ಪೂರ್ವಕವಾಗಿ ಸನ್ಮಾನ ಸ್ವೀಕರಿಸಿ ಮನದಾಳದ ಮಾತುಗಳನ್ನು ಸಭೀಕರ ಮುಂದೆ ತೆರೆದಿಟ್ಟ ಸಂದರ್ಭ.
ಈ ಕಾರ್ಯಕ್ರಮದಲ್ಲಿ ಮಾನ್ಯ ಸಂಸದರಾದ ಸನ್ಮಾನ್ಯ ಶ್ರೀ ಬಿ.ವೈ.ರಾಘವೇಂದ್ರ ಅವರು, ಸೂಡ ಅಧ್ಯಕ್ಷರಾದ ಶ್ರೀ ಜ್ಯೋತಿ ಪ್ರಕಾಶ್ ಅವರು, ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಅವರು, ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಧರ್ಮ ಪ್ರಸಾದ್ ಅವರು, ಭಾಜಪ ಭದ್ರಾವತಿ ತಾಲೂಕು ಅಧ್ಯಕ್ಷರಾದ ಪ್ರಭಾಕರ್ ಅವರು ಉಪಸ್ಥಿತರಿದ್ದರು.