ನಿಪ್ಪಾಣಿ ಮತಕ್ಷೇತ್ರದ ಮತ್ತಿವಡೆ ಗ್ರಾಮದಲ್ಲಿ, ಕುಡಿಯುವ ನೀರು ಸುಮಾರು 25 ಲಕ್ಷ ರೂ.

ಮತ್ತಿವಡೆ
ಉತ್ತಮ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರು ಅವಶ್ಯಕ
ನಿಪ್ಪಾಣಿ ಮತಕ್ಷೇತ್ರದ ಮತ್ತಿವಡೆ ಗ್ರಾಮದಲ್ಲಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಮಂಜೂರಾದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ, 1 ಲಕ್ಷ ಲೀಟರ್ ನೀರಿನ ಸಂಗ್ರಹಣೆಯ ಸಾಮರ್ಥ್ಯವಿರುವ ಮೇಲ್ಮಟ್ಟದ ಜಲಸಂಗ್ರಹಾಲಯವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ಗ್ರಾಮದ ಲಕ್ಷ್ಮೀ ನರಸಿಂಹ ಮಂದಿರಕ್ಕೆ ಭೇಟಿ ನೀಡಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರು ಪ್ರೀತಿ, ಅಭಿಮಾನದಿಂದ ನೀಡಿದ ಸತ್ಕಾರವನ್ನು ಸ್ವೀಕರಿಸಿದರು.
ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ಕುಡಿಯುವ ನೀರಿನ ಬಳಕೆ ಅತ್ಯವಶ್ಯಕವಾಗಿದೆ. ಪ್ರಜೆಗಳ ಶ್ರೇಯೋಭಿದ್ಧಿಗಾಗಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಲಭ್ಯವಾಗಬೇಕು ಎಂಬುದು ನನ್ನ ಸದುದ್ದೇಶವಾಗಿದೆ. ಹೀಗಾಗಿ ಈ ಯೋಜನೆಯನ್ನು ಸರ್ವರೂ ಉತ್ತಮ ರೀತಿಯಲ್ಲಿ ಬಳಸಿಕೊಂಡು, ನೀರಿನ ಅಭಾವವನ್ನು ತಡೆಗಟ್ಟಲು ಹಿತಮಿತವಾಗಿ ಜಲ ಬಳಕೆ ಮಾಡಿ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಊರಿನ ಗಣ್ಯರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
मत्तिवडे
चांगल्या आरोग्यासाठी शुद्ध पिण्याचे पाणी आवश्यक.
निपाणी मतदारसंघातील मत्तीवडे गावात ग्रामीण पिण्याच्या पाण्याचा पुरवठा विभागाकडून मंजूर झालेल्या सुमारे 25 लाख रुपयांचा निधीतून बांधण्यात आलेल्या 1लाख लिटर पाणी साठवण क्षमतेसह उच्च स्तरीय पाण्याच्या टाकीचे राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी उद्घाटन करून, कार्यक्रमास उद्देशून संबोधित केले व यापूर्वी गावातील लक्ष्मी नरसिंह मंदिराला भेट देऊन श्री देवीची पूजा केली व त्यानंतर ग्रामस्थांनी प्रेमाने केलेल्या सत्कार स्वीकारले.
चांगले आरोग्य राखण्यासाठी शुद्ध पिण्याच्या पाण्याचा वापर करणे आवश्यक आहे. प्रत्येक घरातील नागरिकांच्या हितासाठी शुद्ध पिण्याच्या पाण्याची सुविधा असावी असा माझा मुद्दा आहे. यासाठी हा प्रकल्प सर्वांनी चांगल्या पद्धतीने वापरात, पाण्याची कमतरता रोखण्यासाठी पाणी जपून वापरावे असे सांगितले.
यावेळी मान्यवर, स्थानिक पक्षाचे कार्यकर्ते व ग्रामस्थ उपस्थित होते.