ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ವಿವಿಧ ಕೂಲಿ ಕಾರ್ಮಿಕರು ಮಹಿಳೆಯರು ಸೇರಿ ಬೃಹತ್ ಪ್ರತಿಭಟನೆ avintvcom

ಸ್ಲಗ್:- ಬೃಹತ್ ಪ್ರತಿಭಟನೆ
ಸ್ಥಳ:- ಚಿಂಚೋಳಿ
ವರದಿ:- ಶಿವಕುಮಾರ ತಳವಾರ
ಆಂಕರ್:- ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ಭಾರತ ಮುಕ್ತಿ ಮೊರ್ಚಾ ಚಿಂಚೋಳಿ ತಾಲ್ಲೂಕ ಘಟಕ ಹಾಗೂ ಗ್ರಾಮಿಣ ಕೂಲಿ ಕಾರ್ಮಿಕರ ಕಾರ್ಮಿಕರ ಸಂಘಟನೆ ವತಿಯಿಂದ ಚಿಂಚೋಳಿ ಅಂಬೇಡ್ಕರ್ ವೃತ್ತದಿಂದ ತಹಶಿಲ್ದಾರರ ಕಛೇರಿ ವರೆಗೆ ವಿವಿಧ ಕೂಲಿ ಕಾರ್ಮಿಕರು ಮಹಿಳೆಯರು ಸೇರಿ ಬೃಹತ್ ಪ್ರತಿಭಟನೆ ಮಾಡಿ ಚಿಂಚೋಳಿ ತಹಶಿಲ್ದಾರರಿಗೆ ಮನವಿ ಪತ್ರ ನಿಡಿದರು
ಈ ಸಂದರ್ಭದಲ್ಲಿ ಮಾರುತಿ ಗಂಜಗಿರಿ ಯವರು ಮಾಧ್ಯಮದವರ ಜೊತೆ ಮಾತನಾಡಿ ಸಮಾಜಿಕ ಅರಣ್ಯ ಇಲಾಖೆ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ನಿಜವಾಗಿ ಕೆಲಸ ಮಾಡಿದ್ದಾರೆ ಅಂತಹವರಿಗೆ ಎನ್.ಎಮ್.ಆರ್. ಜಿರೋ ಮಾಡಿ ಅವರಿಗೆ ಕೂಲಿ ಸಿಗದಂತೆ ಮಾಡಿದ್ದಾರೆ ಅದಕ್ಕಾಗಿ ಅವರ ನಿತಿಯನ್ನು ಖಂಡಿಸಿ ಸೂಕ್ತ ಕ್ರಮ ಜರುಗಿಸಬೇಕು ಯಾರು ದುಡಿದಿದ್ದಾರೆ ಅಂತಹವರಿಗೆ ಕೂಲಿ ಕೊಡಬೇಕು ಎಂದು ಆಗ್ರಹಿಸಿ ಇನ್ನೂ ಹತ್ತು ಹಲವಾರು ಬೇಡಿಕೆಗಳನ್ನು ಇಟ್ಟು ಇಂದು ಪ್ರತಿಭಟನೆ ಮಾಡುತ್ತಿದ್ದೆವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ವಿಲಾಸ್ ಗೌತಮ್ ನಿಡಗುಂದಾ, ಉಮೇಶ ಧೊಟಿಕೊಳ, ನಿರ್ಮಲ ,ಸಾಮರಾವ್, ಗೊಪಾಲ,ಶ್ರೀಕಾಂತ ಕನಕಪೂರ ಇನ್ನಿತರರು ಇದ್ದರು