AVIN TV

Latest Online Breaking News

ವಿಜಯಪುರ ಜಿಲ್ಲಾ ಜ್ಯೋತಿಬಾ ಫುಲೆ ಪ್ರಶಸ್ತಿಗೆ ಶಿಕ್ಷಕ ಸಾಹಿತಿ ಹಾಗೂ ಕಲಾವಿದ ಚೆಟ್ಟಿಆಯ್ಕೆಯಾಗಿದ್ದಾರೆ avintvcom

Featured Video Play Icon

ಜ್ಯೋತಿಬಾ ಫುಲೆ ಪ್ರಶಸ್ತಿಗೆ ಶಿಕ್ಷಕ, ಸಾಹಿತಿ ಹಾಗೂ ಕಲಾವಿದ ಶರಣು ಚೆಟ್ಟಿ ಆಯ್ಕೆ..

ವಿಜಯಪುರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಆದರ್ಶ ಶಿಕ್ಷಕರಿಗೆ ನೀಡುವ ಜ್ಯೋತಿಬಾ ಫುಲೆ ಪ್ರಶಸ್ತಿಗೆ ಗೋಲಗೇರಿಯ  ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ, ಸಾಹಿತಿ, ಕಲಾವಿದ ಶರಣು ಚಟ್ಟಿ ಆಯ್ಕೆಯಾಗಿದ್ದಾರೆ. ನವೆಂಬರ್ 11 ರಂದು ನಿಡಗುಂದಿಯಲ್ಲಿ ಜರುಗುವ ವಿಜಯಪುರ ಜಿಲ್ಲಾ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ರಾಜ್ಯ ಪ್ರಶಸ್ತಿ, ಮಕ್ಕಳ ಮಾಣಿಕ್ಯ, ಆರೂಢ ಶ್ರೀ, ಕರುನಾಡ ಗುರುಶ್ರೇಷ್ಠ, ಗುರುಕುಲ ಚಕ್ರವರ್ತಿ, ಸಂವಹನ ಸಂಪನ್ನ, ಮಂದಾರ ಸಿರಿ ಆದರ್ಶ ಶಿಕ್ಷಕ,  ಸಗರನಾಡು ಯುವ ಚೇತನ, ವಿಕಲಚೇತನ ಸಾಧಕ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಪ್ರಶಸ್ತಿಗಳು ಶರಣು ಚಟ್ಟಿ ಅವರಿಗೆ  ಸಂದಿವೆ.

ಶಿಕ್ಷಕರ ಈ ಸಾಧನೆಗೆ ವಿಜಯಪುರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ಗೌಡರ, ಪ್ರಧಾನ ಕಾರ್ಯದರ್ಶಿ ಅರ್ಜುನ್ ಲಮಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಗನೂರ, ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ್ ಬೀಳಗಿ, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಜಿ.ಎನ್.ಪಾಟೀಲ, ಸಿ.ಆರ್.ಪಿ ಆರ್.ಎಸ್.ಬಿರಾದಾರ, ಮುಖ್ಯ ಶಿಕ್ಷಕ ಆರ್ .ಜಿ.ಬನಸಿ, ಎಸ್ .ಡಿ ಎಂ .ಸಿ ಅಧ್ಯಕ್ಷ ಮಹಾದೇವ ಭಜಂತ್ರಿ, ಸಹ ಶಿಕ್ಷಕ ಎಂ.ಎಸ್.ಮಣೂರ, ಎಸ್.ಪಿ.ಜಂಗಿನಮಠ, ಡಿ.ಎಂ.ಮುಂಡಾಸೆ, ಎಂ.ಎಸ್.ಚೌಧರಿ  ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕ ಮಿತ್ರರು ಹಾಗೂ ಗೋಲಗೇರಿಯ  ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ..

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!