AVIN TV

Latest Online Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ರೋಣ ಪಟ್ಟಣದ ಸಂಸ್ಥೆಯ “ಜ್ಞಾನತಾಣ” ಕಾರ್ಯಕ್ರಮ avintvcom

ರೋಣ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ – ಮಿಥುನ್ ಜಿ ಪಾಟೀಲ

ವರದಿ : ಮಹೇಶ ಅಚ್ಚಿನಗೌಡ್ರ

ರೋಣ -ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ರೋಣ ಪಟ್ಟಣದ ಸಂಸ್ಥೆಯ  ಕಚೇರಿಯಲ್ಲಿ ಹಮ್ಮಿಕೊಂಡಿದ್ದ     ” ಜ್ಞಾನತಾಣ” ಕಾರ್ಯಕ್ರಮದಲ್ಲಿ ಟ್ಯಾಬ್ ಹಾಗೂ ಲ್ಯಾಪಟಾಪನ್ನು ಪುರಸಭೆ ನೂತನ  ಉಪಾಧ್ಯಕ್ಷರಾದ ಶ್ರೀ ಮಿಥುನ್ ಜಿ ಪಾಟೀಲ ವಿತರಿಸಿ ಮಾತನಾಡಿದರು .ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯೂ ಅನ್‌ಲೈನ್ ಶಿಕ್ಷಣದಿಂದ ವಂಚಿತರಾಗಿರುವ ಬಡ ಮಕ್ಕಳ ಅನುಕೂಲಕ್ಕೆಂದು ರೂಪಿಸಿರುವ ಜ್ಞಾನತಾಣ ಯೋಜನೆಯ ಉಪಯೋಗವನ್ನು ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳುಬೇಕು.

ಒಂದು ಸರಕಾರ ಮಾಡುವ ಕೆಲಸಕ್ಕಿಂತ ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿದೆ. ಮಹಿಳೆಯರು, ಯುವ ಜನತೆಯ ಸ್ವಾವಲಂಬಿ ಜೀವನಕ್ಕಾಗಿ ಕೌಶಲ್ಯಾಭಿವೃದ್ದಿ ತರಬೇತಿ, ನಿರ್ಗತಿಕರಿಗೆ ಮಾಶಾಸನ, ಮಹಿಳೆಯರಿಗೆ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ನೀಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ

ಆಧುನಿಕ ತಂತ್ರಜ್ಞಾನ ಬೆಳವಣಿಗೆಯಾದಂತೆ ಕಲಿಕಾ ಪ್ರಕ್ರಿಯೆಗಳು ಇಂದು ಅಂತರ್ಜಾಲದ ಮೂಲಕವೇ ನಡೆಯುತ್ತಿರುವದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ “ಜ್ಞಾನತಾಣ” ಕಾರ್ಯಕ್ರಮ ಸಹಾಯಕವಾಗುತ್ತದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ  ವಾಸಂತಿ ಅಮಿನ್ , ಈ ವರ್ಷದ ಮಾ.23ಕ್ಕೆ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾದ ನಂತರ ದೇಶದಲ್ಲಿ ಅನೇಕ ರೀತಿಯ ಸಂಕಷ್ಟಗಳು ಎದುರಾಗಿವೆ. ಕೋರೋನದಿಂದ ಮಕ್ಕಳು ಶಾಲೆಗೆ ಹೋಗಿ ನೇರವಾಗಿ ಕಲಿಯುವುದು ಕಷ್ಟವೆನಿಸಿದಾಗ ಅನ್‌ಲೈನ್ ಶಿಕ್ಷಣವನ್ನು ಕೈಗೆತ್ತಿಕೊಳ್ಳಲಾಗಿದೆ.ನಗರ ಪ್ರದೇಶದ ಹಾಗೂ ಶ್ರೀಮಂತರ ಮಕ್ಕಳನ್ನು ಹೊರತು ಪಡಿಸಿದರೆ, ಉಳಿದವರು ಅಗತ್ಯ ಪರಿಕರಗಳಿಲ್ಲದೆ ಅನ್‌ಲೈನ್ ಶಿಕ್ಷಣದಿಂದ ವಂಚಿತರಾಗಿದ್ದರು. ಇದನ್ನು ಮನಗಂಡ ಪೂಜ್ಯ ವೀರೇಂದ್ರ ಹೆಗಡೆ ಅವರು, ಗ್ರಾಮೀಣ ಭಾಗದ ಅರ್ಹ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಟ್ಯಾಬ್ ಮತ್ತು ಲ್ಯಾಪ್‌ಟಾಪನ್ನು  ನೀಡುವ ಯೋಜನೆ ರೂಪಿಸಿದ್ದಾರೆ ಎಂದರು

ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷರಾದ ಶ್ರೀಮತಿ ವಿಧ್ಯಾ ದೊಡ್ಡಮನಿ ಉದ್ಘಾಟಿಸಿದರು ಮತ್ತು ಪುರಸಭೆ ಮುಖ್ಯಾಧಿಕಾರಿಗಳಾದ ನೂರುಲ್ಲಾ ಖಾನ ಪುರಸಭೆ ಸದ್ಯಸ್ಯರಾದ ಶ್ರೀಮತಿ ರೇಣುಕಾ ರಂಗನಗೌಡ್ರ ಸಮಾಜಸೇವಕರಾದ ಶ್ರೀ  ವ್ಹಿ ಬಿ ಸೋಮನಕಟ್ಟಿಮಠ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಶ್ರೀ ಲೋಕೇಶ.ಎಚ್

ಮತ್ತು ವಲಯದ ಮೇಲ್ವಿಚಾರಕರಾದ ಶ್ರೀ ಕೆ ಎಸ್ ಲಕ್ಷ್ಮಪ್ಪ ಮುಂತಾದವರು ಪಾಲ್ಗೊಂಡಿದ್ದರು

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!