AVIN TV

Latest Online Breaking News

ಕನ್ನಡ ರಾಜ್ಯೋತ್ಸವ ಸಂಭ್ರಮದ ಆಚರಣೆ ಹಾಗೂ ಉತ್ತಿಷ್ಠ ಕವನ ಪ್ರಶಸ್ತಿ ಪ್ರದಾನ ಸಮಾರಂಭ

Featured Video Play Icon

ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ನಿಂದ ಅರ್ಥ ಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ

ಬೆಂಗಳೂರು :ಕುಮಾರಸ್ವಾಮಿ ಬಡಾವಣೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್  ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಂಭ್ರಮದ ಆಚರಣೆ ಹಾಗೂ ಉತ್ತಿಷ್ಠ ಕವನ ಪ್ರಶಸ್ತಿ ಪ್ರದಾನ ಸಮಾರಂಭ  ಕಾರ್ಯಕ್ರಮವನ್ನು , ಖ್ಯಾತ  ಕವಿಗಳು, ಸಾಹಿತಿಗಳಾದ ಬಿ. ಆರ್. ಲಕ್ಷ್ಮಣ್ ರಾವ್ ರವರು,  ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳ ಆಚರಣೆ ಆಗದೇ ವರ್ಷಪೂರ್ತಿ ಕನ್ನಡದ ಸಂಭ್ರಮವನ್ನು ಪ್ರತಿಯೊಬ್ಬರು ಕರ್ನಾಟಕದ ಮೂಲೆ ಮೂಲೆಗೂ ಪಸರಿಸುವಂತೆ ಆಗಬೇಕು ಹಾಗೂ ಕವಿಗಳು , ಸಾಹಿತಿಗಳು ಪ್ರಕಟಿಸಿದ  ಕನ್ನಡ ಕವನ, ಸಾಹಿತ್ಯ, ಕಾದಂಬರಿಗಳಿಗೆ ಪ್ರೋತ್ಸಾಹ ನೀಡುವಂತಾಗಬೇಕು , ಈ  ಸಂದರ್ಭದಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ರಾಜ್ಯ ಮಟ್ಟದ ಅಂತರ್ಜಾಲ ಕನ್ನಡ ಕವನ ರಚನೆ  ಸ್ಪರ್ಧೆಯನ್ನು ಆಯೋಜಿಸಿ, ವಿಜೇತರಿಗೆ ನಗದುಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸುವ ಮೂಲಕ ಯುವ ಪೀಳಿಗೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು  ಮಾಡುತ್ತಿರುವುದು  ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಟ್ರಸ್ಟ್ ನ  ಸಂಸ್ಥಾಪಕ ಅಧ್ಯಕ್ಷರಾದ ಸುಜಾತ ಎಂ.ರವರು ಮಾತನಾಡಿ  ಸಮಾಜದ ಸೇವೆಯಲ್ಲಿ ಬಹು ಮುಖ್ಯವಾದ ಸೇವೆ ನಾಡು, ನುಡಿಗೆ ನಮ್ಮ ಕೊಡುಗೆ ನೀಡುವುದು ಅಗತ್ಯ,  ಯುವ ಪೀಳಿಗೆಗೆ  ಹಾಗೂ ಮುಂದಿನ ಪೀಳಿಗೆಗೆ ನಮ್ಮ ಭಾಷೆಯನ್ನು ಉಳಿಸಿ ಬೆಳೆಸಿಕೊಳ್ಳುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು, ಈ  ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ರಾಜ್ಯ ಮಟ್ಟದ ಅಂತರ್ಜಾಲ  ಕನ್ನಡ ಕವನ ರಚನೆ ಸ್ಪರ್ಧೆ ಏರ್ಪಡಿಸಿ  ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿರುವ  ಯುವ ಪ್ರತಿಭೆಗಳನ್ನು ಹೊರ ತರಲು ವೇದಿಕೆಯನ್ನು   ನೀಡಿರುವುದು ನಮ್ಮ ಸಮಾಜ ಸೇವೆಯ ಒಂದು ಭಾಗ ಇದಾಗಿದ್ದು, ಪ್ರತಿಯೊಬ್ಬರೂ ಕೈ ಜೋಡಿಸಿ ನಮ್ಮ ಕನ್ನಡದ ತೇರನ್ನು ಪ್ರತಿ ನಿತ್ಯ ಹಬ್ಬದ  ಆಚರಣೆಯಂತೆ ಸಂಭ್ರಮಿಸುವಂತಾಗಬೇಕು,ಈ ಸ್ಪರ್ಧೆಗೆ ರಾಜ್ಯದ ಪ್ರತಿ ಜಿಲ್ಲೆಯಿಂದ ಅಲ್ಲದೆ ಕಾಸರಗೋಡು, ದುಬೈ, ಅಮೇರಿಕ, ದಿಂದಲೂ ಕವನ ಬಂದಿರುವುದು ಕನ್ನಡದ ವಿಶಿಷ್ಟತೆಯನ್ನು ವೈಭವವನ್ನು ತೋರಿಸುತ್ತದೆ. ಸ್ಪರ್ಧೆಯ ಪ್ರಧಾನ ತೀರ್ಪುಗಾರರಾಗಿ ಪ್ರಸಿದ್ಧ ಕಾದಂಬರಿಕಾರರಾದ,ಶ್ರೀಮತಿ ರೇಖಾ ಕಾಖ0ಡಕಿ ರವರು ಪ್ರಥಮ, ದ್ವಿತೀಯ, ತ್ರಿತೀಯ, ಹಾಗೂ ಹತ್ತು ಸಮಾಧಾನಕರ ವಿಜೇತರ ಪಟ್ಟಿಯನ್ನು ಪ್ರಕಟಿಸಿ, ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ದಿನೇಶ್. ಎಂ. ಅಮ್ಮಿನಳ್ಳಿ ಗೆ ಪ್ರಥಮ ಸ್ಥಾನ, ಬೆಂಗಳೂರಿನ  ಶ್ರೀಮತಿ ಲಲಿತಾ ಕೆ. ಆಚಾರ್ ದ್ವಿತೀಯ ಸ್ಥಾನ, ಉತ್ತರ ಕನ್ನಡ ಜಿಲ್ಲೆಯ ರಮೇಶ್ ತಿಮ್ಮಣ್ಣ ಹೆಗಡೆ ಕೆರೆಕೋಣ ತೃತೀಯ ಸ್ಥಾನ ಗಳನ್ನು ಪಡೆದುಕೊಂಡರು,  ಕಾರ್ಯಕ್ರಮದಲ್ಲಿ ವಿಜೇತರಿಗೆ ಉತ್ತಿಷ್ಠ ಕನ್ನಡ ಕವನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಅತಿಥಿ ಗಣ್ಯರಿಗೆ  ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ  ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ನ ಗೌರವ ಅಧ್ಯಕ್ಷರಾದ ನರಸಿಂಹ ಮೂರ್ತಿ, ಗ್ರಂಥಪಾಲಕರಾದ ಆನಂದ, ಸಹ್ಯಾದ್ರಿ ಕಾಫಿ ಮಾಲೀಕರಾದ ನಾಗೇಶ್, ಶಿವರಾಮಕೃಷ್ಣ, ಟ್ರಸ್ಟಿನ ನಿರ್ದೇಶಕರುಗಳಾದ ಹಾರಿಕ, ಮಹೇಶ್, ಹಾಗೂ ಸದಸ್ಯರು ಪಾಲ್ಗೊಂಡಿದ್ದರು.ಕುಮಾರಿ ಅಪರ್ಣ ಪ್ರಾರ್ಥಿಸಿ,  ಶಿವರಾಮ ಸ್ವಾಗತಿಸಿದರು ಟ್ರಸ್ಟಿನ ಸಂಸ್ಥಾಪ ಅಧ್ಯಕ್ಷರಾದ ಸುಜಾತ ಎಂ ಸರ್ವರಿಗೂ ವಂದಿಸಿದರು.

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!