AVIN TV

Latest Online Breaking News

ಸರ್ಕಾರದ ಸೌಲಭ್ಯಗಳನ್ನು ಬಡವರು ಸದುಪಯೋಗಪಡಿಸಿಕೊಳ್ಳಬೇಕು :-ಸಿವಿಲ್ ನ್ಯಾಯಾಧೀಶ ಎಸ್ ಎಂ ಅರುಟಗಿ ತಿಳಿಸಿದರುavintvcom

ಸರ್ಕಾರದ ಸೌಲಭ್ಯಗಳನ್ನು ಬಡವರ್ಗದ ಜನರು ಸದುಪಯೋಗಪಡಿಸಿಕೊಳ್ಳಬೇಕು :- ಸಿವಿಲ್ ನ್ಯಾಯಾಧೀಶ ಎಸ್ ಎಂ ಅರುಟಗಿ

ಬಾಗೇಪಲ್ಲಿ :-ಹಣದ ಕೊರತೆಯಿಂದ ಜನ ಕಾನೂನು ಸೌಲಭ್ಯದಿಂದ ವಂಚಿತರಾಗಬಾರದು ಮತ್ತು ಬಡ ವರ್ಗದವರಿಗೆ ಉಚಿತ ಕಾನೂನು ಸೇವೆಯನ್ನು ನೀಡುವ ಉದ್ದೇಶದಿಂದ ಉಚಿತ ಕಾನೂನು ಸೇವಾ ಕಾಯಿದೆ ಜಾರಿಗೆ ತರಲಾಗಿದೆ,’’ ಎಂದು  ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಎಸ್ ಎಂ ಅರುಟಗಿ ತಿಳಿಸಿದರು .

ಬಾಗೇಪಲ್ಲಿ  ನ್ಯಾಯಾಲಯದ ಆವರಣದಲ್ಲಿ  ತಾಲ್ಲೂಕು  ಕಾನೂನು ಸೇವಾ ಸಮಿತಿ , ಬಾಗೇಪಲ್ಲಿ  ವಕೀಲರ ಸಂಘ ,ಅಪರ್ಣಾ ಟ್ರಸ್ಟ್, ಮತ್ತು   ಸಿಆರ್ ಟಿ  ಹಾಗೂ ಪತ್ರಕರ್ತ  ಸಂಘದ ವತಿಯಿಂದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಹಾಗೂ ಕಾನೂನು ಇವರ ಸಂಯುಕ್ತ ಆಶ್ರಯದಲ್ಲಿ  ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘‘ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ವೈ ವಿ ಚಂದ್ರಚೂಡ್ ಅವರ ದೂರದಷ್ಟಿಯ ಫಲವಾಗಿ ಇಂದು ಸಾಮಾನ್ಯ ನಾಗರಿಕರೂ ಕಾನೂನಿನ ನೆರವು ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ಹಿಂದುಳಿದವರಿಗೂ ಕಾನೂನು ಸೌಲಭ್ಯ ದೊರೆಯಬೇಕೆಂಬ ಉದ್ದೇಶದಿಂದ ಉಚಿತ ಕಾನೂನು ಸೇವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ನಂತರ ಕೋರ್ಟ್ ಸೂಚನೆ, ಮಾರ್ಗಸೂಚಿ ಮೇರೆಗೆ ಸರಕಾರ ಇದನ್ನು ಶಾಸನಬದ್ಧಗೊಳಿಸಿದೆ.

ಇದರಿಂದ ಎಲ್ಲ ವರ್ಗದ ಜನರೂ ಕಾನೂನು ನೆರವು ಪಡೆಯುವಂತಾಗಿದೆ,’’ ಎಂದು ಹೇಳಿದರು.

‘‘1987ರಲ್ಲಿ ಉಚಿತ ಕಾನೂನು ಸೇವೆ ಕಾಯಿದೆ ರೂಪುಗೊಂಡರೂ, ಜಾರಿಗೆ ಬಂದಿದ್ದು 1995ರಲ್ಲಿ. ಪ್ರಸ್ತುತ ತಾಲೂಕು, ಜಿಲ್ಲೆ , ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ದುರ್ಬಲರಿಗೆ ಕಾನೂನು ನೆರವು, ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ.

ಸಾಮಾಜಿಕ ಬದಲಾವಣೆಗಳಲ್ಲಿ ಕಾನೂನು ಸೇವಾ ಪ್ರಾಧಿಕಾರ ಮಹತ್ವದ ಪಾತ್ರ ವಹಿಸಿದೆ,’’ ಎಂದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ  ಅಶಕ್ತರಿಗೆ ಉಚಿತವಾಗಿ ಕಾನೂನಿನ ಅರಿವು ನೆರವು ನೀಡಿ, ಶಕ್ತರನ್ನಾಗಿಸಿ ಅವರ ಬಾಳಿನ ಆಶಾಕಿರಣವಾಗಿ ಪರಿಣಾಮ ಬೀರಲಿದೆ.

ಪ್ರತಿಯೊಬ್ಬರೂ ಕಾನೂನಿ ಅರಿವು ಹೊಂದಬೇಕಿದೆ,ಈ

ನಿಟ್ಟಿನಲ್ಲಿ ಆಶಾಕಾಯ೯ಕತ೯ರು ಹಾಗೂ ಸ್ಥಳೀಯ ಸಕಾ೯ರಿ  ಅರೆಸಕಾ೯ರಿ ಸಂಘ ಸಂಸ್ಥೆಗಳ ಕಾಯ೯ಕತ೯ರ ಪಾತ್ರ ಪ್ರಮುಖದ್ದಾಗಿದೆ.

ಪ್ರಾಧೀಕಾರವು ಸ್ಥಳೀಯ ತಾಲೂಕು,ಜಿಲ್ಲೆ,ರಾಜ್ಯ,ರಾಷ್ಟ್ರಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನ ಹೊಂದಿದೆ.

ಜನಸಾಮಾನ್ಯರಿಗೆ ಉಚಿತ ಕಾನೂನು ಅರಿವು ನೀಡಿ, ಉಚಿತ ಕಾನೂನು ನೆರವು ನೀಡುವಲ್ಲಿ ಸೇವೆಸಲ್ಲಿಸುತ್ತಿದೆ ಎಂದರು.

ಹಿರಿಯ ವಕೀಲರಾದ ನಂಜಪ್ಪ ಮಾತನಾಡಿದರು.

ಮಕ್ಕಳು ಮಹಿಳೆಯರು,ಪರಿಶಿಷ್ಟ ಜಾತಿ ಪರಿಶಿಷ್ಟ ವಗ೯ದ ಜನ,ಆಥಿ೯ಕ ಸಂಕಷ್ಟದಲ್ಲಿರುವರು,ಪ್ರಾಕೃತಿಕ ಹಾನಿಗೋಳಗಾದವರು ಉಚಿತ ಕಾನುನು ನೆರವು ಪಡೆಯಬಹುದಾಗಿದೆ.

ಮನುಷ್ಯ ಹುಟ್ಟಿನಿಂದ ಸಾಯೋವರೆಗೂ ಕಾನೂನಿನ ನೆರವು ಪ್ರತಿಯೊಬ್ಬರಿಗೂ ಅನಿವಾಯ೯,ಕಾರಣ ಪ್ರತಿಯೊಬ್ಬರೂ ಉಚಿತ ಕಾನೂನು ಸಲಹೆ ಹೊಂದಬೇಕಿದೆ,ಈ ನಿಟ್ಟಿನಲ್ಲಿ   ಪ್ರಜ್ಞಾವಂತರು ಪ್ರತಿಯೊಬ್ಬರಲ್ಲಿ ಜಾಗ್ರತೆ ಮೂಡಿಸಬೇಕಿದೆ ಎಂದರು.

ಬಾಗೇಪಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎ.ನಂಜುಂಡಪ್ಪ ಮಾತನಾಡಿ “ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ” ಸಂಬಂಧಿಸಿದಂತೆ ಉಪನ್ಯಾಸ ನೀಡಿದರು.

ದುಬ೯ಲರಿಗೆ ಉಚಿತ ಕಾನೂನು ಸಲಹೆ  ಹಾಗೂ ಸಕಾ೯ರಿ ಸೌಲಭ್ಯಗಳ ನೆರವು ಒದಗಿಸುವುದಕ್ಕಾಗಿ,ಸಮಿತಿ ಜಾರಿತರಲಾಯಿತು.ದುಬ೯ ೯ ವಗ೯ದವರಿಗೆ ಕಾನೂನಿನ  ಅರಿವು ನೆರವು ನೀಡಲಿಕ್ಕಾಗಿ,ಕಾನೂನು ಸೇವೆಗಳ ಪ್ರಾಧಿಕಾರ ಅಗತ್ಯ ಸಿಬ್ಬಂದಿ ನೇಮಿಸಿ ಸೂಕ್ತ ಕ್ರಮಗಳನ್ನು ಜಾರಿತಂದಿದೆ, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕಿದೆ ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಕೀಲರಾದ ಬಿ.ಎನ್.ದತ್ತಾತ್ರೇಯ ,ಜೆ ಎನ್ ನಂಜಪ್ಪ , ಪಿವಿ ಅಪ್ಪಸ್ವಾಮಿ , ವಿ ನಾರಾಯಣ , ನರಸಿಂಹರೆಡ್ಡಿ , ಕರುಣಾಸಾಗರ ರೆಡ್ಡಿ , ಆರ್ ಚಂದ್ರಶೇಖರ್ ‘  ಜಯಪ್ಪ ,ಮಂಜುಳ, ನಾಗಭೂಷಣ, ಇನ್ನು ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!