ಕೊಲ್ಹಾರ ಪಟ್ಟಣ ಪಂಚಾಯತ ಎರಡನೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆ ನಡೆಯಿತು.avintvcom

ಕೊಲ್ಹಾರ ಪ.ಪಂ ಬಿಜೆಪಿ ವಶ
ಕೊಲ್ಹಾರ: ಕೊಲ್ಹಾರ ಪಟ್ಟಣ ಪಂಚಾಯತ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಿ ಕೊಲಕಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಗೈಬುಸಾಬ್ ಕಂಕರಪೀರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು, ಚುನಾವಣಾಧಿಕಾರಿ ತಹಶಿಲ್ದಾರ ಎಂಎಎಸ್ ಬಾಗವಾನ ಘೋಷಿಸಿದರು.
ಒಟ್ಟು 17 ಸದಸ್ಯ ಬಲದ ಪಟ್ಟಣ ಪಂಚಾಯತಯಲ್ಲಿ ಬಿಜೆಪಿ 9, ಕಾಂಗ್ರೆಸ್ 5 ಹಾಗೂ 3 ಪಕ್ಷೇತರರು ಆಯ್ಕೆಯಾಗಿದ್ದರು. ಇದರಲ್ಲಿ ಬಿಜೆಪಿಯ ವಾರ್ಡ್ ನಂಬರ್ 12ರ ಸುರೇಶ ಹರಣಿಕಾರಿ ಅಕಾಲಿಕ ನಿಧನದಿಂದಾಗಿ ಸದ್ಯ 16 ಜನ ಸದಸ್ಯರಿದ್ದಾರೆ.
ರಾಜಕೀಯ ಹೊಂದಾಣಿಕೆಯಂತೆ ಕಾಂಗ್ರೆಸ್ ಸದಸ್ಯ ಬಿಜೆಪಿಗೆ ಬೆಂಬಲ ನೀಡಿದ ಕಾರಣ,ಬಿಜೆಪಿಯವರು ಗೈಬುಸಾಬ್ ಕಂಕನಪೀರ ಅವರನ್ನ ಬೆಂಬಲಿಸಿದರು. ಎರಡು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು. ಸಂಸದ ರಮೇಶ ಜಿಗಜಿಣಗಿ ಚುನಾವಣೆ ವೇಳೆ ಮತ ಚಲಾಯಿಸಿದರು.