AVIN TV

Latest Online Breaking News

ಮನೆ-ಮನೆಗೆ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಭೂಮಿ ಪೂಜೆ

Featured Video Play Icon

ಅಕ್ಕೋಳ

ಪ್ರಜೆಗಳ ಶ್ರೇಯೋಭಿವೃದ್ಧಿಗಾಗಿ ಕುಡಿಯುವ ನೀರಿನ ಯೋಜನೆಗೆ ಚಾಲನೆ.

ನಿಪ್ಪಾಣಿ ಮತಕ್ಷೇತ್ರದ ಅಕ್ಕೋಳ ಗ್ರಾಮದಲ್ಲಿ, ಜಲಜೀವನ ಮಿಷನ್ ಯೋಜನೆಯಡಿ ಮಂಜೂರಾದ ಸುಮಾರು 2.50 ಲಕ್ಷ ರೂ. ಮೊತ್ತದಲ್ಲಿ, ಮನೆ-ಮನೆಗೆ ಕುಡಿಯುವ ನೀರಿನ ಸರಬರಾಜು ಯೋಜನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿ, ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಹಾಗೂ ರಾಜ್ಯವನ್ನು ಜಲಸುಭದ್ರ ಮಾಡುವತ್ತ ನಮ್ಮ ಸರ್ಕಾರ ಹೆಜ್ಜೆಯಿಡುತ್ತಿದೆ. ಹೀಗಾಗಿ ನನ್ನ ಪ್ರಜೆಗಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರು ಕೂಡ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು, ನೀರಿನ ಸುಸ್ಥಿರ ಬಳಕೆ ಮಾಡಿ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಊರಿನ ಗಣ್ಯರು, ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

अक्कोळ

नागरिकांच्या हितासाठी पिण्याच्या पाण्याचा योजनेला चालना.

निपाणी मतदारसंघातील अक्कोळ गावात जल जीवन मिशन योजनांतर्गत मंजूर झालेल्या सुमारे 2.50लाख रुपयांच्या निधीतून घरोघरी पिण्याचा पाण्याचा पाणीपुरवठा योजनेला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भूमिपूजन करून, चालना दिली व ग्रामस्थांना उद्देशून संबोधित केले.

प्रत्येकासाठी शुद्ध पिण्याचे पाणी आणि राज्य जलसुभद्र करण्यासाठी भाजपा सरकार पावले उचलत आहे. यासाठी नागरिकांना शुद्ध पिण्याच्या पाण्याची समस्या उद्भवू नये म्हणून ही योजना सुरू केली असून प्रत्येकानी हा योजनेचा उपयोग करून घेऊन, पाणी जपून वापरा असे सांगितले.

यावेळी गावातील मान्यवर, लोकप्रतिनिधी, पक्षाचे कार्यकर्ते व ग्रामस्थ उपस्थित होते.

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!