AVIN TV

Latest Online Breaking News

ಧಾರವಾಡ ಯಲಾಟ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ avintvcom

Featured Video Play Icon

ಬಯಲಾಟ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ

ನಮ್ಮ ಪರಂಪರೆ,ಕಲೆ,ಸಂಸ್ಕøತಿ ಮರೆತರೆ ನಮ್ಮತನ ಮರೆತಂತೆ ;

ಕಲೆ ಉಳಿಸಲು ಯುವಕರು ಆಸಕ್ತಿವಹಿಸಲಿ: ಸಚಿವ ಜಗದೀಶ ಶೆಟ್ಟರ್

ಧಾರವಾಡ (ಕರ್ನಾಟಕ ವಾರ್ತೆ) ನ.08:  ಭಾರತದ ಕಲೆ, ಸಾಹಿತ್ಯ, ಸಂಗೀತ ಪರಂಪರೆಯು ಶ್ರೀಮಂತವಾಗಿದ್ದು, ನಾವು ನಮ್ಮ ಜಾನಪದಕಲೆ, ಸಂಸ್ಕøತಿಗಳನ್ನು ಮರೆತರೆ ನಮ್ಮತನವನ್ನು ಮರೆತಂತೆಯಾಗುತ್ತದೆ. ಸಾಂಸ್ಕøತಿಕ ಪರಂಪರೆಯನ್ನು ಮುಂದುವರೆಸಲು ಯುವಕರು ಆಸಕ್ತಿವಹಿಸಿ ಪಾಲ್ಗೊಳ್ಳಬೇಕೆಂದು ಬೃಹತ, ಮದ್ಯಮ ಕೈಗಾರಿಕಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.

ಅವರು ಇಂದು ಸಂಜೆ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ನಡೆದ  2019-2020ನೇ ಸಾಲಿನ ರಾಜ್ಯ ಮಟ್ಟದ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಪ್ರದಾನ ಮಾಡಿ, ಮಾತನಾಡಿದರು.

ನಾಡಿನ ಪರಂಪರೆಯಾಗಿರುವ ಕಲೆ, ಜಾನಪದಕಲೆ, ಸಾಹಿತ್ಯ, ಸಂಸ್ಕøತಿಗಳನ್ನು ಉಳಿಸಿ ಬೆಳೆಸಲು ಸರ್ಕಾರವು ವಿವಿಧ ಅಕಾಡೆಮಿಗಳ ಮೂಲಕ ನಿರಂತರವಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಭಜನೆ, ದೊಡ್ಡಾಟ, ಸಣ್ಣಾಟ, ಬಯಲಾಟ ಮತ್ತು ಜಾತ್ರೆ ಉತ್ಸವಗಳ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಪ್ರದರ್ಶಿಸುವ ಸಾಮಾಜಿಕ ನಾಟಕಗಳು ಜೀವನ ಮೌಲ್ಯಗಳನ್ನು ಸಮಾಜಕ್ಕೆ ಮನವರಿಕೆ ಮಾಡುತ್ತವೆ.

ಆದರೆ ಇಂದು ಟಿ.ವ್ಹಿ, ಮೂಬೈಲ್ಗಳ ಹಾವಳಿಯಿಂದಾಗಿ ಜನರು ಸಾಮಾಜಿಕ ನಾಟಕ ಹಾಗೂ ಜಾನಪದ ಕಲೆಗಳಿಂದ ವಿಮುಖರಾಗುತ್ತಿದ್ದಾರೆ. ಎಲ್ಲವನ್ನು ಫೇಸ್ಬುಕ್, ವಾಟ್ಸಾಆಫ್ಗಳ ಮೂಲಕ ನೋಡಿ ಆನಂದಿಸುತ್ತಿದ್ದಾರೆ. ಇದರಿಂದಾಗಿ ಜಾನಪದ ಕಲೆಗಳು ಪ್ರೋತ್ಸಾಗಳಿಲ್ಲದೆ ಕಣ್ಮರೆಯಾಗುತ್ತಿವೆ ಎಂದು ಅವರು ಹೇಳಿದರು.

ಮುಂದುವರೆದಿರುವ ಪಾಶ್ಚಿಮಾತ್ಯ ರಾಷ್ಟ್ರಗಳು ಸಹ ತಮ್ಮ ಕಲೆ, ಸಾಹಿತ್ಯ, ಜಾನಪದಕಲೆಗಳಿಗೆ ಆದ್ಯತೆ ನೀಡಿ, ಸಂರಕ್ಷೀಸುತ್ತಿದ್ದಾರೆ. ಭಾರತೀಯರಾದ ನಾವು ನಮ್ಮ ಕಲೆಗಳನ್ನು ಗೌರವವಿಸಿ, ಆರಾಧಿಸುವ ಮನೋಭಾವನೆ ಬೆಳಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ 2019-20 ನೇ ಸಾಲಿನ ಅಕಾಡಮಿ ಗೌರವ ಪ್ರಶಸ್ತಿಯನ್ನು ಜಾನಪದ ತಜ್ಞ ಡಾ. ಶ್ರೀಶೈಲ್ ಹುದ್ದಾರ ಅವರಿಗೆ 50 ಸಾವಿರ ರೂ.ಗಳ ಗೌರವಧನ, ಪ್ರಶಸ್ತಿ ಪತ್ರ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಯನ್ನು  ಎಮ್.ಎಸ್.ಮಾಳವಾಡ ಅವರಿಗೆ 25 ಸಾವಿರ ರೂ.ಗಳ ಗೌರವಧನ ಮತ್ತು ಪ್ರಶಸ್ತಿ ಪತ್ರ ನೀಡಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಡಾ. ಶ್ರೀಶೈಲ್ ಹುದ್ದಾರ ಮತ್ತು ಎಮ್.ಎಸ್.ಮಾಳವಾಡ ಮಾತನಾಡಿದರು.

ಕಾರ್ಯಕ್ರಮದ ಸಾನಿದ್ಯವಹಿಸಿ, ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿದರು.

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!