AVIN TV

Latest Online Breaking News

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಶಾಸಕರಿಂದ ಶಂಕುಸ್ಥಾಪನೆ,

Featured Video Play Icon

ದೇವನಹಳ್ಳಿ ಪುರಸಭೆಗೆ ಅಧ್ಯಕ್ಷೆ ಯಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ  ರೇಖಾ ವೇಣುಗೋಪಾಲ್. ಜೆಡಿಎಸ್ ಜೆ ಡಿ ಎಸ್ ಪಕ್ಷದ ವತಿಯಿಂದ ಉಪಾಧ್ಯಕ್ಷೆ ಯಾಗಿ  ಪುಷ್ಪವತಿ ಲಕ್ಷ್ಮೀನಾರಾಯಣ್.ಅವಿರೋಧ ಆಯ್ಕೆ ಯಾದರು

ದೇವನಹಳ್ಳಿ ಪಟ್ಟಣದ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ನ 6 ನೇ ವಾರ್ಡ್ ಸದಸ್ಯೆ ರೇಖಾ ಜಿ.ಎನ್.ವೆಣುಗೋಪಾಲ್ ಅಧ್ಯಕ್ಷೆಯಾಗಿ ಜೆಡಿಎಸ್ನ 7 ನೇ ವಾರ್ಡ್ ಸದಸ್ಯೆ ಪುಷ್ಪಲತ ಕೆಆರ್ ಲಕ್ಷ್ಮೀನಾರಾಯಣ್ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ ಪುರಸಭೆ ಕೈವಶವಾಯಿತು.

23 ಸದಸ್ಯರ ಬಲ ಹೊಂದಿರುವ ಪುರಸಭೆಗೆ 2019 ರ ಮೇ ತಿಂಗಳಲ್ಲಿ ಪುರಸಭಾ ಸದಸ್ಯರ ಚುನಾವಣೆ ನಡೆದು ಕಾಂಗ್ರೆಸ್ನಿಂದ 10, ಜೆಡಿಎಸ್ನಿಂದ 7 ಬಿಜೆಪಿ 2 ಬಿಎಸ್ಪಿ1 ಹಾಗೂ ಪಕ್ಷೇತರರು 3 ಸದಸ್ಯರು ಚುನಯಿತರಾಗಿದ್ದರು 18 ತಿಂಗಳ ಬಳಿಕ ಇದೀಗ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ. ಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಯ ಆಯ್ಕೆಗೆಚುನಾವಣೆ ನಿಗದಿಯಾಗಿತ್ತು. ಜೆಡಿಎಸ್ ನ 14 ನೇ ವಾರ್ಡಿನ ಸದಸ್ಯ ವೈಸಿ ಸತೀಶ್ಕುಮಾರ್ ನಿಧನದಿಂದ 22 ಜನ ಮಾತ್ರ ಸದಸ್ಯರು ಹಾಜರಿದ್ದು ನಿಗದಿತ ಸಮಯಕ್ಕೆ ಎರಡು ಸ್ಥಾನಗಳಿಗೆ ಒಬ್ಬೊಬ್ಬ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದರು ಮದ್ಯಾಹ್ನ 1 ಕ್ಕೆ ಚುನಾವಣಾ ಸಮಯ ಮುಗಿದ ಬಳಿಕ ಇವರ ಅವಿರೋಧ ಆಯ್ಕೆಯನ್ನು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಉಪಸ್ಥಿಯಲ್ಲಿ ಹಾಜರಿದ್ದ 22 ಸದಸ್ಯರ ಸಮ್ಮುಖದಲ್ಲಿ  ಚುನಾವಣಾಧಿಕಾರಿ ತಹಸೀಲ್ದಾರ ಅಜಿತ್ ರೈ ಘೋಷಿಸಿದರು.

ಬೈಟ್ :- 1 ನೂತನವಾಗಿ ಆಯ್ಕೆಯಾದ ಅಧ್ಯಕ್ಷೇ ರೇಖಾ ವೇಣುಗೋಪಾಲ್ ಮತನಾಡಿ,ಪಕ್ಷಾತೀತವಾಗಿ ಎಲ್ಲಾ ಸದಸ್ಯರ ಹಾಗು ಶಾಸಕರ ಹಾಘೂ ತಾಲ್ಲುಕಿನ ಕಾಂಗ್ರೆಸ್ ಮುಖಂಡರ ಸಹಕಾರದಿಂದ ಇಂದು ನನಗೆ ಈ ಜವಾಬ್ದಾರಿಯುತ ಸ್ಥಾನ ದೊರೆತಿದೆ ಪಟ್ಟಣದ ನೈರ್ಮಲ್ಯ ಸ್ವಚ್ಚತೆ ಚರಂಡಿ ಹಾಘೂ ರಾಜಕಾಲುವೆ ಸ್ವಚ್ಚತೆ ದುರಸ್ಥಿಗೆ ಮೊದಲ ಆಧ್ಯತೆ ನೀಡಲಾಗುವುದು ರಸ್ತೆಗಳ ಅಭಿವೃದ್ದಿಯ ಜೊತೆಗೆ ಪಟ್ಟಣದ ಸರ್ವಾಂಗೀಣ ಪ್ರಗತಿಗೆ ಸರ್ಕಾರದಿಂದ ಬರುವ ಅನುದಾನವನ್ನು ಸಮನಾಗಿ ಬಳಸಿಕೊಂಡು ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಬಿಎರರಸ್ಪಿ ಎನ್ನದೆ ಎಲ್ಲಾ ಸದಸ್ಯರನ್ನು ಒಗೂಡಿಸಿಕೊಂಡು ಸೇವೆ ಸಲ್ಲಿಸುವೆ ಎಂದರು.

ಅಧ್ಯಕ್ಷರಿಗೆ ಸಹಾರಿಯಾಗಿ ಪುರದ ಪ್ರಗತಿಗೆ ಶ್ರಮಿಸುವುದಾಗಿ ನೀರೆಇನ ಸಮಸ್ಯೆ ಇಲ್ಲವಾಗಿಸುತ್ತ ಕಾರ್ಯೋನ್ಮುಖವಾಗುವುದಾಗಿಹೇಳಿದರು.

ಬೈಟ್ :-2  ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಹಿಂದೆ ಜೆಡಿಎಸ್ ಕಾಂಗ್ರಸ್ ಮೈತ್ರಿ ಸರ್ಕಾರ ಮಾಡಿದಂತೆ ಇಲ್ಲಿನ ಪುರಸಭೆಯಲ್ಲಿ ಕಳೆದ ಸಾಲಿನಲ್ಲಿಯೂ ಎಲ್ಲಾ ಸದಸ್ಯರು ಒಗಗ್ಗಟ್ಟಾಗಿ ಕೆಲಸ ಮಾಡಿದ್ದರು ಈ ಬಾರಿಯೂ ಜೆಡಿಎಸ ಮತ್ತು ಕಾಂಗ್ರೆಸ್ ಒಟ್ಟಾಗಿ ಪುರಸಭಾ ಆಡಳಿತ ನಡೆಸಲಿದೆ ಸರ್ಕಾರದಿಂದ ಪಟ್ಟಣಭದ ಅಭಿವೃದ್ದಿ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಪಕ್ಷಾತೀತವಾಗಿ ಮಂಜೂರು ಮಾಡಿಸಿಕೊಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಸಿಬ್ಬಂದಿ, ಕೆಪಿಸಿಸಿ ಪ್ರಧಾನಕಾರ್ಯಧರ್ಶಿ ಎಸಿ ಶ್ರೀನಿವಾಸ್,  ಮುಂತಾದವರು ಹಾಜರಿದ್ದು ಅಭಿನಂದಿಸಿದರು.

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!