AVIN TV

Latest Online Breaking News

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಶಾಸಕರಿಂದ ಶಂಕುಸ್ಥಾಪನೆ avintvcom

Featured Video Play Icon

ವಿಧ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಶಾಸಕರಿಂದ ಶಂಕುಸ್ಥಾಪನೆ, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿ ಜೇನುಕಲ್ ಸಿದ್ದಾಪುರದಿಂದ ದೊಡ್ಡಹಟ್ಟಿವರಗೆ, ಜೇನುಕಲ್ ಸಿದ್ದಾಪುರದಿಂದ ನೀರಗುಂದದವರಗೆ ಕಾಂಕ್ರೀಟ್ ರಸ್ತೆ , ಜೇನುಕಲ್ ಸಿದ್ದಾಪುರ, ದೊಡ್ಡಹಟ್ಟಿ, ಶಾಂತ ಮಲ್ಲಾಪುರ ಪರಿಮಿತಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನಾನು ರಾಜಕೀಯ ಪ್ರವೇಶ ಮಾಡಿದ ಮೊದಲ ದಿನಗಳಲ್ಲಿ ಬಾಗೇಶಪುರ ಜಿ.ಪಂ.ಸದಸ್ಯನಾಗಿದ್ದಾಗ ರಂಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಈ ಗ್ರಾಮಗಳೆಲ್ಲ ಗುಡ್ಡ, ಕಾಡಿನಿಂದ ಕೂಡಿದ್ದ ಪ್ರದೇಶವಾಗಿದ್ದವು, ಇಲ್ಲಿನ ಯಾವ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳಿರಲ್ಲ. ಈ ಗ್ರಾಮಗಳನ್ನು ರಾಜಕೀಯವಾಗಿ ನಿರ್ಲಕ್ಷಿಸಲಾಗಿತ್ತು. ನಾನು ಶಾಸಕನಾದ ಮೇಲೆ ಈ ಎಲ್ಲಾ ಗ್ರಾಮಗಳನ್ನು ಗುರುತಿಸಿ ಅವುಗಳಿಗೆ ರಸ್ತೆ, ಚರಂಡಿ, ಮಾಡಿಸಿದ್ದೇನೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇನೆ. ಸಮುದಾಯವ ಭವನಗಳನ್ನು ನಿರ್ಮಿಸಿ ಕೊಟ್ಟಿದ್ದೇನೆ. ಈ ಭಾಗದಲ್ಲಿ ಹಳ್ಳಗಳು ಹೆಚ್ಚಿದ್ದು, ಇವುಗಳಿಗೆ ಅಡ್ಡಲಾಗಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಿದ್ದೇನೆ.ಇದರಿಂದ ಅಂತರ್ಜಲ ಮಟ್ಟ ಹೆಚ್ಚಿದೆ ಮುಂದೆಯೂ ಈ ಗ್ರಾಮಗಳಿಗೆ ಜನಗಳ ಬೇಡಿಕೆಗೆ ಅನುಗುಣವಾಗಿ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು. ಇತ್ತೀಚಿನ ದಿನಗಳಲ್ಲಿ ಶಾಸಕರು ಬರೀ ಕಾಂಕ್ರೀಟ್ ರಸ್ತೆ ಮಾತ್ರ ನಿರ್ಮಾಣ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ… ಗ್ರಾಮಂತರ ಪ್ರದೇಶಗಳಿಗೆ ಸೌಕರ್ಯ ಒದಗಿಸುವುದು ತಪ್ಪೇ, ನೀವೆ ತೀರ್ಮಾನ ಮಾಡಿ. ಎತ್ತಿನ ಹೊಳೆಯಿಂದ ನೀರು ತರಲು ಹೋರಾಟ ಮಾಡಿದ್ದೇನೆ .ಕಾಮಗಾರಿ ಮುಗಿಯುವ ಹಂತದಲ್ಲಿದ್ದು..ಮುಂದಿನ ದಿನಗಳಲ್ಲಿ ಇವು ಕಾರ್ಯಗತಗೊಳಿಸಲಾಗುವುದು ಎಂದರು , ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರಂಗಸ್ವಾಮಿ, ರಂಗಾಪುರ ರಾಜಾನಾಯ್ಕ ದೊಡ್ಡಹಟ್ಟಿ ಬಸವರಾಜು, ಬಾಗೇಶಪುರ ಶಿವಣ್ಣ, ರಂಗೇನಹಳ್ಳಿ ಮಧು, ಚಿಟ್ಟನಹಳ್ಳಿ ಕುಮಾರ, ಅಪ್ಪೇನಹಳ್ಳಿ ಜಲೇಂದ್ರ ಲೋಕೋಪಯೋಗಿ ಎ.ಇ.ಇ ನಟೇಶ್, ಕೆ.ಆರ್.ಐ.ಡಿ.ಎಲ್ ಇಂಜಿನಿಯರ್ ದೀಕ್ಷಿತ್, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು…

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!